ಹರಿಯಾಣದಲ್ಲಿ ಬಿಜೆಪಿ -ಜೆಜೆಪಿ ದೋಸ್ತಿ

ಹರಿಯಾಣದಲ್ಲಿ ಬಿಜೆಪಿ -ಜೆಜೆಪಿ ದೋಸ್ತಿ

ನವದೆಹಲಿ, ಅ. 26 : ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎನ್ನಲಾಗಿತ್ತು. ಆದರೆ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ. ಹರಿಯಾಣದಲ್ಲಿ ಕಾಂಗ್ರೆಸ್ 30 ಕ್ಷೇತ್ರಗಳಿಗೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅತಂತ್ರ ಫಲಿತಾಂಶದಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಹರಿಯಾಣದಲ್ಲಿ ಕೊನೆಗೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದುಷ್ಯಂತ್ ಚೌತಾಲಾರ ಜೆಜೆಪಿ ಜತೆ ಮೈತ್ರಿ ಅಂತಿಮಗೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸುದ್ದಿಗೋಷ್ಠಿಯಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ನಾವು ಜೆಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚನೆ ಕಾರ್ಯ ಪ್ರಾರಂಭಿಸಲಿದ್ದೇವೆ. ಬಿಜೆಪಿಗೆ ಹರಿಯಾಣ ಮುಖ್ಯಮಂತ್ರಿ ಸ್ಥಾನ ಹಾಗೂ ಜೆಜೆಪಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದಿದ್ದಾರೆ. ದುಷ್ಯಂತ್ ಚೌತಾಲಾ ಮಾತನಾಡಿ, ಹರಿಯಾಣಕ್ಕೆ ಸ್ಥಿರ ಸರ್ಕಾರ ನೀಡಲು ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿ ನಾನು ಅಮಿತ್ ಷಾ ಮತ್ತು ಜೆ.ಪಿ. ನಡ್ಡಾರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ. ಬಿಜೆಪಿ 40 ಸ್ಥಾನ ಪಡೆದಿದ್ದು, ಜೆಜೆಪಿಯ 10 ಶಾಸಕರ ಬೆಂಬಲದಿಂದಾಗಿ ಮೈತ್ರಿ ಸರ್ಕಾರದ ಬಲ 50ಕ್ಕೆ ಏರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos