‘ಸೂಜಿದಾರ’ ಚಿತ್ರ ತಂಡ ಹರಿಪ್ರಿಯಾ ವಿರುದ್ಧ ದೂರು!

‘ಸೂಜಿದಾರ’ ಚಿತ್ರ ತಂಡ ಹರಿಪ್ರಿಯಾ ವಿರುದ್ಧ ದೂರು!

ಬೆಂಗಳೂರು, ಮೇ. 16, ನ್ಯೂಸ್ಎಕ್ಸ್ ಪ್ರೆಸ್‍:  ‘ಸೂಜಿದಾರ’ ಚಿತ್ರದಲ್ಲಿ ತಮ್ಮ ಪಾತ್ರವನ್ನು ಸರಿಯಾಗಿ ಬಿಂಬಿಸಿಲ್ಲ ಹಾಗೂ ತಮ್ಮ ಜತೆ ಚರ್ಚಿಸದೆ ನಿರ್ದೇಶಕರು ಕಥೆಯನ್ನು ತಿರುಚಿದ್ದಾರೆ ಎಂದು ಸೂಜಿದಾರ ಚಿತ್ರತಂಡ ಹರಿಪ್ರಿಯಾ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ಈ ಆರೋಪಕ್ಕೆ ಸಂಬಂಧಿಸಿದಂತೆ ಮಂಡಳಿಗೆ ದೂರು ನೀಡಿ, ಹರಿಪ್ರಿಯಾ ಅವರು ಅನಗತ್ಯವಾಗಿ ನಮ್ಮ ಹಾಗೂ ಚಿತ್ರತಂಡದ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ಹೇಳಿಕೆಯಿಂದಾಗಿ ಕಳೆದ ಮೂರು ದಿನಗಳಿಂದ ಚಿತ್ರದ ಕಲೆಕ್ಷನ್ ಕೂಡ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ. ಹರಿಪ್ರಿಯಾ ಅವರಿಗೆ ಕರೆ ಮಾಡಿದರೂ ಕಾಲ್ ರಿಸೀವ್ ಮಾಡ್ತಿಲ್ಲ. ಇಂತಹ ಅನಗತ್ಯ ಹೇಳಿಕೆ ನೀಡಿರುವ ಹರಿಪ್ರಿಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಫಿಲ್ಮ ಚೇಂಬರ್ಗೆ ದೂರು ಸಲ್ಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos