ಕೆಟ್ಟ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಕೆಟ್ಟ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಬೆಂಗಳೂರು: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿನ್ನ ನಡೆದ ಐಪಿಎಲ್ 2024 ರ ಪಂದ್ಯ ನಂ. 14 ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ತಮ್ಮ ಮೊದಲ ಹೋಮ್ ಪಂದ್ಯದಲ್ಲಿ, ಮುಂಬೈ ಆರು ವಿಕೆಟ್‌ಗಳಿಂದ ಸೋಲು ಕಂಡಿತು. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ ಈ ಬಾರಿಯ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿತು.

ಈ ಸೋಲಿನ ಮೂಲಕ ಹಾರ್ದಿಕ್ ಪಾಂಡ್ಯ ಅತಿ ಕೆಟ್ಟ ದಾಖಲೆ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕನಾಗಿ ಸತತ ಮೂರನೇ ಪಂದ್ಯವನ್ನು ಕಳೆದುಕೊಂಡ ನಂತರ, ಹಾರ್ದಿಕ್ ಈ ಹಿಂದೆ ಹರ್ಭಜನ್ ಸಿಂಗ್ ಹೊಂದಿದ್ದ ಅನಗತ್ಯ ದಾಖಲೆಯನ್ನು ಸರಿಗಟ್ಟಿದರು. 30ರ ಹರೆಯದ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿ ಮೊದಲ ಮೂರು ಪಂದ್ಯಗಳಲ್ಲಿ ಸೋತ ಎರಡನೇ ನಾಯಕರಾದರು.

ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ತಂಡ ಕೇವಲ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ ಆರಂಭದಲ್ಲಿ 48 ರನ್​ಗಳಿಗೆ 3 ವಿಕೆಟ್‌ ಕಳೆದುಕೊಂಡಿತಾದರೂ ನಂತರ ರಿಯಾನ್ ಪರಾಗ್ ಕ್ರೀಸ್‌ನಲ್ಲಿ ನಿಂತು 39 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿ ರಾಜಸ್ಥಾನಕ್ಕೆ ಪಂದ್ಯವನ್ನು ಗೆಲ್ಲಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos