ನಮ್ಮೆಲ್ಲಾ ನೆಚ್ಚಿನ ಶಿಕ್ಷಕರಿಗೆ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು

  • In State
  • September 5, 2023
  • 54 Views
ನಮ್ಮೆಲ್ಲಾ ನೆಚ್ಚಿನ ಶಿಕ್ಷಕರಿಗೆ, ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಬೆಂಗಳೂರು: ಸೆಪ್ಟೆಂಬರ್‌ 5ರಂದು ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭಾರತದ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲು ಹೇಳಿದ್ದರು. ಅವರ ಜನ್ಮದಿನವನ್ನು ಈಗಲೂ ಅತ್ಯಂತ ಸಡಗರದಿಂದ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.

ಶಿಕ್ಷಕರ ದಿನಾಚರಣೆ ಕೇವಲ ಒಂದು ಆಚರಣೆಯಲ್ಲ. ನಮ್ಮ ಜೀವನದಲ್ಲಿ ಶಿಕ್ಷಕರ ಮಹತ್ವವನ್ನು ನೆನೆಪಿಸಿಕೊಳ್ಳುವ ದಿನ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ನಿಸ್ವಾರ್ಥ ಸೇವೆ, ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಅವರ ಪಾತ್ರ ಮತ್ತು ಒಟ್ಟಾರೆಯಾಗಿ ವ್ಯಕ್ತಿಗಳು ಮತ್ತು ಸಮಾಜದ ಮೇಲೆ ಶಿಕ್ಷಕರು ಬೀರುವ ಸಕರಾತ್ಮಕ ಪ್ರಭಾವವನ್ನು ಗುರುತಿಸುವ ದಿನವಾಗಿದೆ. ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಶಿಕ್ಷಕರಿಗೆ ಧನ್ಯವಾದವನ್ನು.

ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ನನಗೆ ಜ್ಞಾನ ಮತ್ತ ಜೀವನದ ಮೌಲ್ಯವನ್ನು ಕಲಿಸಿದ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ತಾಯಿ ಜೀವ ಕೊಡುತ್ತಾಳೆ, ತಂದೆ ಭದ್ರತೆ ನೀಡುತ್ತಾರೆ,ಆದರೆ ಶಿಕ್ಷಕರು ಈ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತಾರೆ. ನನಗೆ ಜೀವನ ಪಾಠವನ್ನು ಕಲಿಸಿದಂತಹ, ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನಗೆ ಬೆನ್ನೆಲುಬಾಗಿ ನಿಂತ ನನ್ನ ತಂದೆ ತಾಯಿ, ಗುರುಗಳು ಮತ್ತು ನನ್ನ ಸ್ನೇಹಿತರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ.ಅಜ್ಞಾನದ ಕತ್ತಲೆಯಿಂದ ಜ್ಞಾನವೆಂಬ ಬೆಳಕನ್ನು ಕೊಂಡೊಯ್ದು. ನೀವು ಕೇವಲ ಶಿಕ್ಷಕರಲ್ಲ; ನೀವು ನನ್ನ ಸ್ನೇಹಿತ ನನ್ನ ಮಾರ್ಗದರ್ಶಿ, ಸದಾ ನನ್ನ ಏಳಿಗೆಯನ್ನು ಬಯಸುವವರು. ನನ್ನನ್ನು ತಿದ್ದಿ ತೀಡಿ, ನನ್ನೆಲ್ಲಾ ಸಾಧನೆಗೆ ಸ್ಪೂರ್ತಿಯಾಗಿ ನಿಂತಿಂದ್ದಾರೆ. ಗುರಿಯನ್ನು ಸಾಧಿಸಲು ನೀವು ನನಗೆ ಬೆಂಬಲ ನೀಡಿದ್ದೀರೀ. ಪ್ರತಿ ಬಾರಿಯೂ ನಾನು ಸೋಲನುಭವಿಸಿದಾಗಲೆಲ್ಲಾ ನೀವು ನನಗೆ ಧೈರ್ಯ ತುಂಬಿದ್ದೀರಿ.
ನಮಗೆ ಜ್ಞಾನವನ್ನು ನೀಡಿ, ಉತ್ತಮ ಭವಿಷ್ಯಕ್ಕಾಗಿ ನಮ್ಮನ್ನು ಸಿದ್ಧಗೊಳಿಸಿದ ಎಲ್ಲಾ ಗುರುಗಳಿಗೆ ನನ್ನ ಕೃತಜ್ಞತೆಗಳು, ಜೀವನದಲ್ಲಿ ಶಿಸ್ತು, ಏನಾದರೂ ಸಾಧಿಸಬೇಕೆಂಬ ಹಠವನ್ನು ಕಲಿಸಿದ ನಿಮಗೆ ಶಿಕ್ಷಕರ ದಿನದ ಶುಭಾಶಯಗಳು

ಫ್ರೆಶ್ ನ್ಯೂಸ್

Latest Posts

Featured Videos