ಹುಣಸೂರು ನಗರದಲ್ಲಿ ಹನುಮಾನ್‌ ಜಯಂತಿ!

ಹುಣಸೂರು ನಗರದಲ್ಲಿ ಹನುಮಾನ್‌ ಜಯಂತಿ!

ಮೈಸೂರು: ಹುಣಸೂರು ನಗರದಲ್ಲಿ ಇಂದು ಹನುಮಾನ್‌ ಜಯಂತಿಯ ಸಂಭ್ರಮ ಮನೆ ಮಾಡಿದೆ. ಅನೇಕ ಕ್ರಮಗಳನ್ನು ಜಿಲ್ಲಾಡಳಿತ ಜೊತೆಗೆ ಪೊಲೀಸ್ ಇಲಾಖೆ ಕೈಗೊಂಡಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂದು. ಹುಣಸೂರು ನಗರದಲ್ಲಿ ಇವತ್ತು ಹನುಮ ಜಯಂತಿ ಸಂಭ್ರಮ. ಹುಣಸೂರು ನಗರದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಆದೇಶ ನೀಡಿದ್ದಾರೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸುರಕ್ಷಿತ ದೃಷ್ಟಿಯಿಂದ ರಜೆ ನೀಡಲಾಗಿದೆ.

ಹನುಮ ಜಯಂತಿಯ ಪ್ರಯುಕ್ತ ಜಿಲ್ಲಾಡಳಿತ ಒಂದಿಷ್ಟು ಕ್ರಮಗಳನ್ನು ಕೈಗೊಂಡಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸುರಕ್ಷತಾ ದೃಷ್ಟಿಯಿಂದ ಈ ಘೋಷಣೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚರವನ್ನು ವಹಿಸಿದೆ.  ನಗರದ ರಂಗನಾಥ್ ಬಡಾವಣೆಯಿಂದ ಮೆರವಣಿಗೆ ಆರಂಭಗೊಂಡಿದೆ. ಸೂಕ್ಷ್ಮ ಪ್ರದೇಶದಲ್ಲಿ ಹನುಮಾನ್ ಮೆರವಣಿಗೆ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಗೌಡ ಸೇರಿದಂತೆ ಹಲವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.  ಬಿಜೆಪಿಯ ನಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಸಾಕಷ್ಟು ಜನ ಹನುಮಾನ್‌  ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ.  ಹಾಗಾಗಿ ಜಿಲ್ಲಾಡಳಿತ ಯಾವುದೇ ಘಟನೆ ನಡೆಯಬಾರದೆಂದು ಕಟ್ಟೇಚ್ಚರವಹಿಸಿದೆ.  ಅಲ್ಲಲ್ಲಿ ಪೊಲೀಸ್ ಭದ್ರತೆ ಮತ್ತೊಂದು ಕಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos