ಜ.10 ಮತ್ತು 11ರಂದು ಹಂಪಿ ಉತ್ಸವ

ಜ.10 ಮತ್ತು 11ರಂದು ಹಂಪಿ ಉತ್ಸವ

ಬಳ್ಳಾರಿ, ಜ. 1 : ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ಜಗತ್ ಪ್ರಸಿದ್ಧ ಹಂಪಿ ಉತ್ಸವ ಜ.10 ಮತ್ತು 11ರಂದು ಎರಡು ದಿನ ನಡೆಯಲಿದ್ದು, ಈ ಬಾರಿಯ ಹಂಪಿ ಉತ್ಸವದ ಲಾಂಛನವನ್ನು ಇಂದು ಅನಾವರಣಗೊಳಿಸಲಾಯಿತು.

ಕಲ್ಲಿನ ರಥ ಮತ್ತು ವಿಜಯನಗರ ಅರಸರ ಲಾಂಛನ, ಕಾಮನಬಿಲ್ಲಿನ ಏಳು ಬಣ್ಣಗಳಿಂದ ಕೂಡಿರುವ ಈ ಲಾಂಛನವನ್ನು ಕಾರವಾರದ ಕಲಾವಿದ ದಾಮೋದರ್ ರಚಿಸಿದ್ದಾರೆ. ಉತ್ಸವದ ಲಾಂಛನ ಬಿಡುಗಡೆ ಮಾಡಿದ ನಂತರ ಮಾತನಾಡಿದ ಶಾಸಕ ಜಿ.ಕರುಣಾಕರ ರೆಡ್ಡಿ, ಮೈಸೂರು ದಸರಾದ ಮಾದರಿಯಲ್ಲಿ ಹಂಪಿ ಉತ್ಸವವು ವಿಜೃಂಭಣೆಯಿಂದ ಜರುಗಬೇಕು. ಉತ್ಸವಕ್ಕೆ ಬರುವ ಪ್ರವಾಸಿಗರಿಗೆ ಬೆಂಗಳೂರಿನಿಂದ ವಿಶೇಷ ವಿಮಾನದ ವ್ಯವಸ್ಥೆ ಕಲ್ಪಿಸಬೇಕು. ಉತ್ಸವದಲ್ಲಿ ಬಂದೋಬಸ್ತ್ ಗೆ ಮಹಿಳಾ ಮತ್ತು ಗಸ್ತು ಪೊಲೀಸರನ್ನು ನಿಯೋಜಿಸಬೇಕು ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ಉತ್ಸವವು ನಾಡಹಬ್ಬದ ರೀತಿಯಲ್ಲಿ ಆಚರಣೆಯಾಗಬೇಕು. ಹಂಪಿ ವಿಶ್ವವಿದ್ಯಾಲಯವನ್ನು ಈ ಉತ್ಸವದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos