ಹಲಸಿನ ಹಣ್ಣಿನಲ್ಲಿದೆ ‘ಆರೋಗ್ಯ’ಕರ ಗುಣಗಳು

ಹಲಸಿನ ಹಣ್ಣಿನಲ್ಲಿದೆ ‘ಆರೋಗ್ಯ’ಕರ ಗುಣಗಳು

ಸಾಮಾನ್ಯವಾಗಿ ಎಲ್ಲರೂ
ಇಷ್ಟಪಡುವ ಹಣ್ಣು ಹಲಸಿನ ಹಣ್ಣು. ಚಳಿಗಾಲದ ಅಂತ್ಯ ಹಾಗೂ ಬೇಸಿಗೆಯ ಆರಂಭದಲ್ಲಿ ಶುರುವಾಗುವ ಈ ಹಣ್ಣಿನ
ಗಾತ್ರ ಬಹು ದೊಡ್ಡದು. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನ ಪಡೆದುಕೊಂಡಿದೆಯೋ ಹಾಗೆ ಆರೋಗ್ಯದ
ವಿಷಯದಲ್ಲೂ ಮಹತ್ತರ ಪ್ರಯೋಜನಗಳನ್ನು ಪಡೆದುಕೊಂಡಿದೆ.

* ಮುಖದ ಮೇಲಿನ ಚರ್ಮ
ಸುಕ್ಕುಗಟ್ಟುತ್ತಿದ್ದರೆ, ಹಲಸಿನ ಬೀಜವನ್ನು ತಣ್ಣಗಿರುವ ಹಸುವಿನ ಹಾಲಿನಲ್ಲಿ ನೆನೆಸಿ ಪೇಸ್ಟ್‌ ಮಾಡಿ
ಮುಖಕ್ಕೆ ಲೇಪಿಸಿದರೆ ಚರ್ಮದ ಸುಕ್ಕು ಕಡಿಮೆಯಾಗುತ್ತದೆ.

* ದೇಹದಲ್ಲಿ ಗಾಯವಾಗಿದ್ದರೆ
ಹಲಸಿನ ಮರದ ತೊಗಟೆಯನ್ನು ಸುಟ್ಟು ಬೂದಿ ಮಾಡಿ ಆ ಬೂದಿಯನ್ನು ತೆಂಗಿನ ಎಣ್ಣೆ ಜೊತೆ ಕಲಸಿ ಹಚ್ಚಿದರೆ
ಗಾಯ ಬೇಗ ಮಾಯುತ್ತದೆ.

* ಹಲಸಿನ ಹಣ್ಣನ್ನು
ನಿಯಮಿತವಾಗಿ ಸೇವಿಸಿದರೆ ದೇಹದ ಶಕ್ತಿ ಹೆಚ್ಚುತ್ತದೆ.

* ಮುಖಕ್ಕೆ ಲಕ್ವ
ಹೊಡೆದು ನೋವಿದ್ದರೆ ಹಲಸಿನ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಮುಖದ ಮೇಲೆ ಇಟ್ಟು ಕಟ್ಟಿದರೆ
ನೋವು ಕಡಿಮೆಯಾಗುತ್ತದೆ.

* ಭೇದಿ ಆಗುತ್ತಿದ್ದರೆ
ಹಲಸಿನ ಮರದ ತೊಗಟೆಯನ್ನು ನೀರಿನ ಜತೆ ಕಷಾಯ ಮಾಡಿ ಸೇವಿಸಿದರೆ ಭೇದಿ ನಿಲ್ಲುತ್ತದೆ. ಹಲಸಿನ ಕಾಯಿ
ಪಲ್ಯ ಸೇವಿಸಿದರೂ ಭೇದಿ ನಿಲ್ಲುತ್ತದೆ.

* ಹಲಸಿನ ಎಲೆ ಮತ್ತು
ಬೇರಿನ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಚರ್ಮದ ಸಮಸ್ಯೆ ಗುಣವಾಗುತ್ತದೆ.

* ಹೆಚ್ಚು ದಾಹವಾಗುವ
ಸಮಸ್ಯೆ ಇದ್ದರೆ ಹಲಸಿನ ಹಣ್ಣನ್ನು ಸಕ್ಕರೆ ಜೊತೆ ಸೇವಿಸಿದರೆ ದಾಹ ನಿವಾರಣೆಯಾಗುತ್ತದೆ.

* ಹಲಸಿನ ಮರದ ಚಕ್ಕೆ
ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಮತ್ತು ಬಾಯಲ್ಲಿ ಹುಳವಾಗಿದ್ದರೆ ಹುಳಗಳು ಶಮನವಾಗುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos