ಇಂದು ಹೆಚ್.ಎ.ಎಲ್ ನೌಕರರಿಂದ ಮುಷ್ಕರ

ಇಂದು ಹೆಚ್.ಎ.ಎಲ್ ನೌಕರರಿಂದ ಮುಷ್ಕರ

ಬೆಂಗಳೂರು, ಅ. 14: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ (ಹೆಚ್ಎಎಲ್) 20,000ಕ್ಕೂ ಹೆಚ್ಚು ನೌಕರರು ಇಂದಿನಿಂದ ವೇತನ ಪರಿಷ್ಕರಣೆ ಇತರ ಅನೇಕ ಬೇಡಿಕೆಗಳಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್ಎಎಲ್ ಎಲ್ಲಾ 9 ಕಾರ್ಮಿಕ ಸಂಘಗಳ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಶೇಖರ್, “ಕಾರ್ಮಿಕರ ವೇತನ ಪರಿಷ್ಕರಣೆ ಸೇರಿದಂತೆ ಅನೇಕ ಬೇಡಿಕೆಗಳ ಕುರಿತು ಹೆಚ್ಎಎಲ್ ಆಡಳಿತ ಮಂಡಳಿಯ ಜೊತೆಗಿನ ಮಾತುಕತೆ ವಿಫಲವಾಗಿದೆ. ಹೀಗಾಗಿ ಕಾರ್ಮಿಕ ಕಾನೂನುಗಳಿಗೆ ಅನುಸಾರವಾಗಿ ನಾವು 15 ದಿನಗಳ ಹಿಂದೆ (ಸೆ.30) ನೊಟೀಸ್ ನೀಡಿದ್ದು, ಈ ಪ್ರಕಾರ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಘೋಷಿಸಲಾಗಿದೆ” ಎಂದು ತಿಳಿಸಿದ್ದಾರೆ.

“ನಮ್ಮ ಬೇಡಿಕೆಗಳನ್ನು ಪರಿಗಣಿಸಲು ವ್ಯವಸ್ಥಾಪಕರು ನಿರಾಕರಿಸಿದ್ದರಿಂದ ಇಂದಿನಿಂದ ದೇಶದ ಎಲ್ಲಾ ವಿವಿಧ 9 ಸ್ಥಳಗಳಲ್ಲಿ ಮುಷ್ಕರವನ್ನು ಪ್ರಾರಂಭಿಸಲು ನಾವು ಕರೆ ನೀಡಿದ್ದೇವೆ. ಹೀಗಾಗಿ ನಮ್ಮ ಎಲ್ಲಾ 20 ಸಾವಿರ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos