ಹಗರಿ ಆಂಜನೇಯ ಕ್ರಿಕೆಟರ್ಸ್ ತಂಡಕ್ಕೆ ಜಯ

ಹಗರಿ ಆಂಜನೇಯ ಕ್ರಿಕೆಟರ್ಸ್ ತಂಡಕ್ಕೆ ಜಯ

ಹಗರಿಬೊಮ್ಮನಹಳ್ಳಿ: 18 ಬಾಲುಗಳಲ್ಲಿ 55 ರನ್ ಸಿಡಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ವಿ.ಸಂತೋಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಹಗರಿ ಆಂಜನೇಯ ಕ್ರಿಕೆಟರ್ಸ್ ತಂಡ ಫೈನಲ್ ಪಂದ್ಯದಲ್ಲಿ ಯಂಗ್ ಟೈಗರ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿ ಕಪ್ಪನ್ನು ಮುಡಿಗೇರಿಸಿಕೊಂಡಿತು.
ಪಟ್ಟಣದ ಪ್ರಸಿದ್ಧಿ ಶಾಲೆ ಬಳಿ ಇರುವ ಓಂಪಿಚ್ ಕ್ರೀಡಾಂಗಣದಲ್ಲಿ ಹಗರಿ ಆಂಜನೇಯ ಕ್ರಿಕೆಟರ್ಸ್ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತಿಥೇಯ ತಂಡವು 9.2ನೇಯ ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ 85 ರನ್ ಬಾರಿಸಿ ರೂ.10,000 ನಗದು ಬಹುಮಾನ ಮತ್ತು ಕಪ್ ಗಳಿಸಿತು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಸ್ಥಳೀಯ ಯಂಗ್ ಟೈಗರ್ಸ್ ತಂಡ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 83 ರನ್ ಗಳಿಸಲು ಸಾಧ್ಯವಾಯಿತು.
ವಿಜಯಿ ತಂಡದ ಎಂ.ರವಿ ಮಾರಕ ದಾಳಿ ನಡೆಸಿ 4 ವಿಕೆಟ್ ಪಡೆದರು. ಒಂದು ಹಂತದಲ್ಲಿ ಸೋಲುವ ಭೀತಿಯಲ್ಲಿದ್ದಾಗ 9ನೇ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದ ಹಗರಿ ಆಂಜನೇಯ ಕ್ರಿಕೆಟರ್ಸನ ವಿ.ಸಂತೋಷ್ ಅವರು ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ವಿಜಯಿ ತಂಡದ ನಾಯಕ ವಿ.ಹುಲುಗಪ್ಪ ನಗದು ಬಹುಮಾನ ಮತ್ತು ಕಪ್ ಸ್ವೀಕರಿಸಿದರು.
ರನ್ನರ್ ಅಪ್ ತಂಡಕ್ಕೆ ರೂ.5000 ನಗದು ಮತ್ತು ಕಪ್ ವಿತರಿಸಲಾಯಿತು. 6 ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಮೆಂಟಿನಲ್ಲಿ ತಾಲೂಕಿನ 42 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.

ಫ್ರೆಶ್ ನ್ಯೂಸ್

Latest Posts

Featured Videos