ಹಾಗಲಕಾಯಿ ತೂಕ ಇಳಿಸುವಲ್ಲಿ ಎತ್ತಿದ ಕೈ

ಹಾಗಲಕಾಯಿ ತೂಕ ಇಳಿಸುವಲ್ಲಿ ಎತ್ತಿದ ಕೈ

ಮಾ. 28, ನ್ಯೂಸ್ ಎಕ್ಸ್ ಪ್ರೆಸ್: ಮೊಮೊರ್ಡಿಕಾ ಚಾರಂತಿಯಾ ಎನ್ನುವ ಹೆಸರಿನಿಂದ ಕರೆಲ್ಪಡುವಂತಹ ಹಾಗಲಕಾಯಿಯನ್ನು ಇಂದಿನ ದಿನಗಳಲ್ಲಿ ಹಲವಾರು ಚಿಕಿತ್ಸೆಗಳಿಗಾಗಿ ವಿಶ್ವದೆಲ್ಲೆಡೆಯಲ್ಲಿ ಬಳಸಲಾಗುತ್ತದೆ. ಹಾಗಲಕಾಯಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇಂತಹ ಪೋಷಕಾಂಶಗಳು ಒಂದೇ ರೀತಿಯ ಆಹಾರದಲ್ಲಿ ಸಿಗುವುದು ತುಂಬಾ ಕಡಿಮೆ.

ಇದರಲ್ಲಿ ಕಾರ್ಬ್ಸ್ ಮತ್ತು ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇದೆ. ಹಾಗಲಕಾಯಿಯು ತುಂಬಾ ಕಹಿಯಾಗಿರುವ ಕಾರಣದಿಂದಾಗಿ ಹೆಚ್ಚಿನ ಜನರು ಇದನ್ನು ತಮ್ಮ ಆಹಾರ ಕ್ರಮದಿಂದ ದೂರವೇ ಇಡುವರು. ಆದರೆ, ಇದು ದೇಹದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವುದು.

ದೇಹದಲ್ಲಿರುವ ಕೊಬ್ಬು ಅಥವಾ ಅಂಗಾಂಶವು ಕೊಬ್ಬಿನಾಮ್ಲಗಳನ್ನು ಸಂಪರ್ಕಿಸುವತಹ ರಾಸಾಯನಿಕಯುಕ್ತ ಅಂಶವಾಗಿದೆ. ಹಾಗಲಕಾಯಿ ಯಲ್ಲಿ ಇರುವಂತಹ ಕಿಣ್ವಗಳು ಕೊಬ್ಬನ್ನು ವಿಘಟಿಸಿ ಫ್ರೀ ಕೊಬ್ಬಿನಾಮ್ಲವಾಗಿ ಮಾಡುವುದು. ಇದರಿಂದ ದೇಹದಲ್ಲಿನ ಕೊಬ್ಬು ಕಡಿಮೆ ಆಗುವುದು. ಇದು ಕೊಬ್ಬಿನಾಮ್ಲದ ಸಂಶ್ಲೇಷಣೆಗೆ ಬೇಕಾಗಿರುವ ಕಿಣ್ವಗಳ ಮಟ್ಟವನ್ನು ಕೂಡ ಕಡಿಮೆ ಮಾಡುವುದು. ಇದರಿಂದಾಗಿ ಕೊಬ್ಬಿನ ಉತ್ಪತ್ತಿಯು ತಗ್ಗುವುದು.

ಹಾಗಲಕಾಯಿಯು ಪಿತ್ತಕೋಶದಲ್ಲಿರುವ ಬೆಟಾ ಕೋಶಗಳನ್ನು ರಕ್ಷಿಸುವುದು. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನು ಆಗಿರುವತಹ ಇನ್ಸುಲಿನ್ ನ ಸಂಗ್ರಹಣೆ ಮತ್ತು ಬಿಡುಗಡೆಗೆ ಕಾರಣವಾಗುವುದು. ಹಾಗಲಕಾಯಿಯಲ್ಲಿ ಮಧುಮಹೇ ವಿರೋಧಿಯಾಗಿರುವಂತಹ ಚರಾಂಟಿನ್, ವಸಿನ್, ಮತ್ತು ಪಾಲಿಪೆಪ್ಟೈಡ್- ಪಿ ಎನ್ನುವ 3 ಅಂಶಗಳು ಇವೆ. ಇದು ಇನ್ಸುಲಿನ್ ತಡೆ ಮತ್ತು ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವುದು. ಅತೀ ಕಡಿಮೆ ಇನ್ಸುಲಿನ್ ಅಂಶವಿದ್ದರೆ ಆಗ ಅದು ಗ್ಲೂಕೋಸ್ ನ ಕೆಟ್ಟ ಬಳಕೆಗೆ ಕಾರಣವಾಗುವುದು. ಅದೇ ರೀತಿಯಾಗಿ ಅತಿಯಾಗಿ ಇನ್ಸುಲಿನ್ ಅಂಶವಿದ್ದರೆ ಆಗ ಅದರಿಂದ ಹಸಿವಿನಲ್ಲಿ ಹೆಚ್ಚಳ ಮತ್ತು ಆಹಾರ ಸೇವನೆಯಲ್ಲಿ ಹೆಚ್ಚಳವಾಗುವುದು. ಇದರಿಂದಾಗಿ ಬೊಜ್ಜು ಆವರಿಸುವುದು.

ಹಾಗಲಕಾಯಿಯು ಯಕೃತ್ ಪಿತ್ತರಸದ ಸ್ರವಿಸುವಿಕೆಯನ್ನು ಉತ್ತೇಜಿಸುವಂತೆ ಮಾಡುವುದು. ಇದರಿಂದಾಗಿ ಕೊಬ್ಬಿ ಚಯಾಪಚಯವು ಆಗುವುದು. ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವಂತಹ ವ್ಯಕ್ತಿಗಳಲ್ಲಿ ಈ ಕ್ರಿಯೆಯು ತಡೆ ಹಿಡಿಯಲ್ಪಟ್ಟಿರುವುದು. ಇದು ಎಎಂಪಿಕೆ ಎನ್ನುವಂತಹ ಪ್ರೋಟೀನ್ ನ್ನು ಕ್ರಿಯಾತ್ಮಕವಾಗಿಸುವುದು. ಇದರಿಂದ ಇನ್ಸುಲಿನ್ ನ ಬಿಡುಗಡೆಯು ಬದಲಾವಣೆ ಆಗುವುದು. ಇದರಿಂದ ಎಲ್ಲಾ ಕೋಶಗಳು ಗ್ಲೋಕೋಸ್ ನ್ನು ಹೀರಿಕೊಳ್ಳುವಂತೆ ಮಾಡುವುದು. ಸ್ನಾಯುಗಳು ಸೇರಿದಂತೆ ಕೊಲೆಸ್ಟ್ರಾಲ್ ನ ಸಂಶ್ಲೇಷಣೆ ಕೂಡ ಆಗುವುದು.

ಬೊಜ್ಜಿಗೆ ಕಾರಣವಾಗುವಂತಹ ಮೂಲವನ್ನು ಅದು ನಿವಾರಣೆ ಮಾಡುವುದು.

ಹಾಗಲಕಾಯಿಯಲ್ಲಿ ಶೇ. 90ರಷ್ಟು ನೀರಿನಾಂಶವಿದೆ. ಇದು ಹಸಿವನ್ನು ಕಡಿಮೆ ಮಾಡುವುದು. ಇದರಿಂದಾಗಿ ದೇಹಕ್ಕೆ ಬೇಕಾಗುವಂತಹ ತೇವಾಂಶವು ಸಿಗುವುದು ಮತ್ತು ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ನೆರವಾಗುವುದು. ದೇಹದಲ್ಲಿರುವಂತಹ ವಿಷಕಾರಿ ಅಂಶಗಳಿಂದಾಗಿ ಬೊಜ್ಜು ಬೆಳೆಯುವುದು. ದೇಹದಲ್ಲಿ ಅತಿಯಾಗಿ ವಿಷಕಾರಿ ಅಂಶವು ಜಮೆಯಾದರೆ ಆಗ ಯಕೃತ್ ಗೆ ಕೆಲಸ ಮಾಡಲು ಸಾಧ್ಯವಾಗದು ಮತ್ತು ಅದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದು.

ಫ್ರೆಶ್ ನ್ಯೂಸ್

Latest Posts

Featured Videos