ಗುರ್ಗಾಂವ್-ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಲೀನ ನಗರ

ಗುರ್ಗಾಂವ್-ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಲೀನ ನಗರ

ನವದೆಹಲಿ, ಮಾ.5, ನ್ಯೂಸ್ ಎಕ್ಸ್ ಪ್ರೆಸ್: ಭಾರತದ ಗುರ್ಗಾಂವ್ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ ಜಗತ್ತಿನ ನಗರಗಳ ಪೈಕಿ ಟಾಪ್ ಸ್ಥಾನದಲ್ಲಿದೆ ಎಂದು ಐಕ್ಯೂ ಏರ್ ಏರ್‌ ವಿಶುವಲ್ ಮತ್ತು ಗ್ರೀನ್ ಪೀಸ್ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ. ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ ಹತ್ತು ನಗರಗಳ ಪೈಕಿ7 ನಗರಗಳು ಭಾರತದಲ್ಲಿದ್ದರೆ ಒಂದು ಚೀನಾ ಹಾಗೂ ಇನ್ನೆರಡು ಪಾಕಿಸ್ತಾನದಲ್ಲಿವೆ.

ಗುರ್ಗಾಂವ್ ನಂತರ ಅತ್ಯಂತ ಹೆಚ್ಚು ಮಾಲಿನ್ಯವಿರುವ ಭಾರತದ ನಗರಗಳು- ಘಾಝಿಯಾಬಾದ್, ಫರೀದಾಬಾದ್, ಭಿವಾಡಿ, ನೊಯ್ಡ, ಪಾಟ್ನಾ ಮತ್ತು ಲಕ್ನೋ ಆಗಿವೆ. ಇತರ ಮೂರು ನಗರಗಳು ಚೀನಾದ ಹೋಟನ್ ಹಾಗೂ ಪಾಕಿಸ್ತಾನದ ಲಾಹೋರ್ ಮತ್ತು ಫೈಸಲಾಬಾದ್ ಆಗಿವೆ. ದಿಲ್ಲಿ ಈ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.

ಗಾಳಿಯಲ್ಲಿರುವ ಗರಿಷ್ಠ ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ) 2.5 ಇದರ ಆಧಾರದಲ್ಲಿ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳ ಪಟ್ಟಿ ತಯಾರಿಸಲಾಗಿದ್ದು, ಇದಕ್ಕಾಗಿ ಸರಕಾರಿ ವೆಬ್ ಸೈಟ್ ಗಳಲ್ಲಿರುವ ಅಂಕಿಅಂಶಗಳನ್ನು ಬಳಸಲಾಗಿದೆ.

ಈ ವರದಿ ತಯಾರಿಗಾಗಿ ಜಗತ್ತಿನ 3,000 ನಗರಗಳ ಅಧ್ಯಯನ ನಡೆಸಲಾಗಿದ್ದು ಅವುಗಳ ಪೈಕಿ ಶೇ.64ರಷ್ಟು ನಗರಗಳು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಸುರಕ್ಷಿತ ಪಿಎಂ 3.5 ಪ್ರಮಾಣ ಮಟ್ಟಕ್ಕಿಂತಲೂ ಅಧಿಕ ಪಿಎಂ ಹೊಂದಿವೆ. ದಕ್ಷಿಣ ಏಷ್ಯಾದಲ್ಲಿ ಶೇ 99ರಷ್ಟು ನಗರಗಳು ಈ ಸುರಕ್ಷಿತ ಪಿಎಂ ಮಟ್ಟ ದಾಟಿವೆ.

ಚೀನಾದ ರಾಜಧಾನಿ ಬೀಜಿಂಗ್ 2013ರಲ್ಲಿ ಅತ್ಯಂತ ಮಲಿನ ನಗರವೆಂದು ಘೋಷಿಸಲ್ಪಟ್ಟಿದ್ದರೂ ಈಗ ಅಲ್ಲಿನ ಮಾಲಿನ್ಯ ಮಟ್ಟ ಶೇ.40ರಷ್ಟು ಇಳಿದಿದೆ.

ಫ್ರೆಶ್ ನ್ಯೂಸ್

Latest Posts

Featured Videos