ಗುಜರಾತ್ ಗಲಭೆ: ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು

ಗುಜರಾತ್ ಗಲಭೆ: ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ನಿಂದ ಜಾಮೀನು

ನವದೆಹಲಿ: ಗೋಧ್ರಾ ಗಲಭೆ ಸಂದರ್ಭದಲ್ಲಿ ನಡೆದ ನರೋಡಾ ಪಟಿಯಾ ಹತ್ಯಾಕಾಂಡ ಪ್ರಕರಣದಲ್ಲಿ ಜೈಲು ಸೇರಿದ್ದ ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.

ಉಮೇಶ್​ಭಾಯ್​ ಭವಾರ್ಡ್​​, ರಾಜ್​​ಕುಮಾರ್​​, ಹರ್ಷದ್​​ ಹಾಗೂ ಪ್ರಕಾಶ್​ಭಾಯ್​ ರಾಥೋಡ್​​ಗೆ ಜಾಮೀನು ಮಂಜೂರಾಗಿದೆ. ಇವರಿಗೆ ಗುಜರಾತ್​ ಹೈಕೋರ್ಟ್‍​ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದ್ರೆ ಗುಜರಾತ್​​ ಹೈಕೋರ್ಟ್ ನೀಡಿರುವ ಶಿಕ್ಷೆಯ ಆದೇಶ  ಚರ್ಚಾಸ್ಪದವಾಗಿದೆ ಎಂದು ಹೇಳಿ ಸುಪ್ರೀಂ ಕೋರ್ಟ್ ಈ ನಾಲ್ವರಿಗೆ​ ಜಾಮೀನು ನೀಡಿದೆ.

ಗೋಧ್ರಾ ಪ್ರಕರಣದ ಬಳಿಕ 2002ರ ಫೆಬ್ರವರಿ 28ರಂದು ನರೋಡಾ ಪಟಿಯಾ ಬಳಿ 97 ಜನರನ್ನ ಹತ್ಯೆ ಮಾಡಲಾಗಿತ್ತು. ಕಳೆದ ವರ್ಷ ಜೂನ್​​ನಲ್ಲಿ ಗುಜರಾತ್​ ಹೈಕೋರ್ಟ್​, ಭಜರಂಗದಳ ಮುಖಂಡ ಬಾಬು ಭಜರಂಗಿ ಸೇರಿದಂತೆ ಪ್ರಕರಣದ 16 ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಹಾಗೇ ಮಾಜಿ ಬಿಜೆಪಿ ಸಚಿವೆ ಮಾಯಾ ಕೊಡ್ನಾಣಿ ಸೇರಿದಂತೆ 18 ಮಂದಿಯನ್ನು ಖುಲಾಸೆಗೊಳಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos