ಎಂವಿಎಂ ಶಾಲೆಗೆ ಗಿನ್ನಿಸ್ ಗರಿ

ಎಂವಿಎಂ ಶಾಲೆಗೆ ಗಿನ್ನಿಸ್ ಗರಿ

ದೇವನಹಳ್ಳಿ, ಅ. 19: ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ  ಊಟ ಮತ್ತು ಹಸಿವಿನ ಮಹತ್ವದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ಆಹಾರದ ಮಹತ್ವ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ ಎಂದು  ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ತಿಳಿಸಿದರು.

ತಾಲೂಕಿನ ಕನ್ನಮಂಗಲ ಗ್ರಾಮದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿರುವ ಮಾರುತಿ ವಿದ್ಯಾಮಂದಿರ ಶಾಲಾವರಣದಲ್ಲಿ ಆಹಾರ ಪದಾರ್ಥಗಳು ಮತ್ತು ಅದರ ಮೌಲ್ಯ ಕುರಿತು ಏರ್ಪಡಿಸಿದ್ದ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಮಯದಲ್ಲಿ ಆಹಾರ ಭದ್ರತೆ ಕುರಿತು ಕನ್ನಮಂಗಲ ಶಾಲೆಯ ಸುಮಾರು 1200 ವಿದ್ಯಾರ್ಥಿಗಳಿಗೆ 1 ಘಂಟೆಗಳ ಕಾಲ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಆಹಾರದ ಮೌಲ್ಯವನ್ನು ತಿಳಿಸಿಕೊಡುವುದರ ಮೂಲಕ ವಿದ್ಯಾರ್ಥಿ ದೆಸೆಯಿಂದಲೇ ಆಹಾರದ ಬಗ್ಗೆ ಕಾಳಜಿ ವಹಿಸುವಂತೆ ತಿಳಿಸಿಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಶಾಲೆ ಇಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಗೆ ದಾಖಲಾಗುತ್ತಿರುವುದು ಶಾಲೆಯ ಘನತೆಯನ್ನು ಎತ್ತಿ ತೋರಿಸುತ್ತಿರುವುದಲ್ಲದೇ ಗ್ರಾಮಾಂತರ ಜಿಲ್ಲೆಗೆ ಒಂದು ಕಿರೀಟ ತೊಡಿಸಿದಂತಾಗಿದೆ ಎಂದು ತಿಳಿಸಿದರು.

ಎಷ್ಟೋಜನ ಹಸಿವಿನಿಂದ ಬಳಲುತ್ತಿರುವುವರನ್ನು ನೋಡುತ್ತಿದ್ದೇವೆ. ಆಹಾರದ ಭದ್ರತೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ ಉತ್ತಮವಾಗಿದೆ. ಶಾಲೆಯಲ್ಲಿ ಇಂತಹ ಕಾರ್ಯಕ್ರವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಈಗಿರುವ ದಿನಗಳಲ್ಲಿ ಆಹಾರ ಪದ್ಧತಿಗಳು ಬದಲಾಗಿರುವುದರಿಂದ ದೈಹಿಕ ಮಟ್ಟ ಕಡಿಮೆಗೊಂಡು ಆರೋಗ್ಯ ಅಸಮತೋಲಕ್ಕೆ ಕಾರಣವಾಗುತ್ತಿದೆ. ಆಗೀನ ಕಾಲದಲ್ಲಿ ಆಹಾರದಲ್ಲಿ ಪೌಷ್ಠಿಕಾಂಶಗಳು ಸಿಗುತ್ತಿದ್ದವು ಎಂದು ಮಾಹಿತಿ ನೀಡಿದರು.

ಶಾಲಾ ಸಂಸ್ಥಾಪಕ ಕಾರ್ಯದರ್ಶಿ ರಾಧಾ ಶ್ರೀನಿವಾಸ ಮಾತನಾಡಿ, ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಆಹಾರ ಲಭಿಸುತ್ತಿಲ್ಲ. ಆಹಾರದ ಚಕ್ರವನ್ನು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಅರಿತುಕೊಂಡು ಭವಿಷ್ಯಕ್ಕಾಗಿ ಆಹಾರವನ್ನು ಕಾಪಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಎಲ್ಲಾ ಶಿಕ್ಷಕರು ಹಾಗೂ ಮಕ್ಕಳನ್ನು ಅಭಿನಂದಿಸುತ್ತೇನೆ. ರಾಸಾಯನಿಕ ವಸ್ತುಗಳನ್ನು ಬಳಸಿ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಆಗೀನ ಕಾಲದಲ್ಲಿ ಸಾವಯುವ ಗೊಬ್ಬರ ಬಳಸಿಕೊಂಡು ಬೆಳೆ ಬೆಳೆಯಲಾಗಿತ್ತು. ಇದೀಗ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಆಹಾರದಲ್ಲಿರುವ ಶಕ್ತಿ ಕಡಿಮೆಯಾಗುತ್ತಿದೆ. ಆಹಾರ ಹೆಚ್ಚು ವ್ಯರ್ಥವಾಗುತ್ತಿದೆ ಎಂದು ಹೇಳಿದರು.

ಆಡಳಿತಾಧಿಕಾರಿ ಗೌರವ್.ಕೆ.ಎಸ್ ಮಾತನಾಡಿ, ಈಗಾಗಲೇ ಏಷ್ಯಾ ಬುಕ್ ಆಫ ರೆಕಾರ್ಡ್ನಲ್ಲಿ ನಮ್ಮ ಶಾಲೆ ದಾಖಲಾಗಿದ್ದು, ಈಗ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಅನ್ನು ಪಡೆದುಕೊಳ್ಳುತ್ತಿರುವುದು ಶಾಲೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದಂತಾಗಿದೆ ಎಂದು ತಿಳಿಸಿದರು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನ ವತಿಯಿಂದ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ವಿವೇಕ್ ಮತ್ತು ತಂಡ ಕಾರ್ಯಕ್ರಮ ವೀಕ್ಷಿಸಿ ದಾಖಲಿಸಿಕೊಂಡರು.

ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕ ಅಧ್ಯಕ್ಷ ಕೆ.ಶ್ರೀನಿವಾಸ, ಖಜಾಂಚಿ ಗಿರಿಜಾ ಶ್ರೀನಿವಾಸ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮಂತ್ ಶ್ರೀನಿವಾಸ, ಪ್ರಾಂಶುಪಾಲ ಹೇಮಲತಾ ಖತ್ರಿ, ವಿಜಯ್ ಭಾಸ್ಕರ್ ರೆಡ್ಡಿ, ಮುಖ್ಯ ಶಿಕ್ಷಕರಾದ ಹರೀಶ್.ಕೆ.ಬಿ, ಬಿ.ಎನ್.ರಾಮಾಂಜಿನಪ್ಪ, ಗೀತಾ, ಹಿರಿಯ ಶಿಕ್ಷಕ ಕೆ.ಚಂದ್ರಪ್ಪ ಮತ್ತಿತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos