ಅತಿಥಿ ಉಪನ್ಯಾಸಕರಿಗೆ ಶೇ.50 ಮೀಸಲಾತಿ ವ್ಯಾಪಕ ಆಕ್ರೋಶ

ಅತಿಥಿ ಉಪನ್ಯಾಸಕರಿಗೆ ಶೇ.50 ಮೀಸಲಾತಿ ವ್ಯಾಪಕ ಆಕ್ರೋಶ

ಬೆಂಗಳೂರು, ಮೇ.7, ನ್ಯೂಸ್ ಎಕ್ಸ್ ಪ್ರೆಸ್:  ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಕ್ಕೆ ಶೀಘ್ರದಲ್ಲಿಯೇ ಸರ್ಕಾರದಿಂದ ನೇಮಕಾತಿ ಪ್ರಕ್ರಿಯೆ ಆರಂಭ ಆಗಲಿದೆ. ಈ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಶೇ. 50ರಷ್ಟು ಹುದ್ದೆಗಳನ್ನು ಅರ್ಹತೆ ಮಾನದಂಡದಲ್ಲಿ ಕಲ್ಪಿಸಲಾಗುತ್ತದೆ. ಈ ಮೂಲಕ ಅತಿಥಿ ಉಪನ್ಯಾಸಕಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿಕೆ, ವಿವಾದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಸ್ನಾತಕೋತ್ತರ ಪದವಿಯ ಜೊತೆ, ಪಿಹೆಚ್.ಡಿ ನೆಟ್‌/ಕೆಸೆಟ್‌ ಮಾಡಿಕೊಂಡು ನಾನಾ ಕಾರಣಗಳಿಂದ ಅತಿಥಿ ಉಪನ್ಯಾಸಕರ ಹುದ್ದೆಗೆ ತೆರಳಿರುವುದಿಲ್ಲ, ಇದಲ್ಲದೇ ಬೇರೆ ಬೇರೆ ಕಡೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಈಗ ನೇರ ನೇಮಕಾತಿಯಲ್ಲಿ ಶೇ. 50ರಷ್ಟು ಹುದ್ದೆಗಳನ್ನು ಅರ್ಹತೆ ಮಾನದಂಡದಲ್ಲಿ ಅತಿಥಿ ಉಪನ್ಯಾಸಕರಿಗೆ ಕಲ್ಪಿಸಲು ರಾಜ್ಯ ಸರಕಾರ ತೀರ್ಮಾನಿಸಿರುವುದು ಎಷ್ಟರ ಮಟ್ಟಿಗೆ ಸರಿ ಅಂತ ಸಾವಿರಾರು ಮಂದಿ ನೆಟ್, ಪಿಎಚ್ ಡಿ ಹಾಗೂ ಕೆಸೆಟ್ ಪಾಸುಮಾಡಿದ ಸ್ನಾತಕೋತ್ತರ ಪದವೀಧರರು, ಸರಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸರಕಾರ ಅತಿಥಿ ಉಪನ್ಯಾಸಕರಿಗೆ ನೀಡುವ ಸಂಬಂಳವನ್ನು ನೆಚ್ಚಿಕೊಂಡು ಕೂರುವುದಕ್ಕೆ ಸಾಧ್ಯವಾಗದೇ ನಾವು ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತೇವೆ, ಇದಲ್ಲದೇ ಸರಕಾರ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ ಮಾಡುವುದನ್ನೇ ನಾವು ಕಾಯುತ್ತಿರುತ್ತೇವೆ. ಹೀಗಿರುವಾಗ ನೇಮಕಾತಿ ಸಮಯದಲ್ಲಿ ಎಲ್ಲರನ್ನೂ ಒಂದೇ ಸಮನಾಗಿ ನೋಡಬೇಕು ಅದನ್ನು ಬಿಟ್ಟು ಅತಿಥಿ ಉಪನ್ಯಾಸಕರಿಗೆ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಮನ್ನಣೆ ನೀಡಿ ಬೇರೆಯವರಿಗೆ ಒಂದು ರೀತಿ ನೋಡುವುದು ಸರಿಯಲ್ಲ ಅಂತ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಾಯುತ್ತಿರುವವರು ಸರಕಾರವನ್ನು ಪ್ರಶ್ನೆ ಮಾಡಿದ್ದಾರೆ. ಸರಕಾರ ಎಲ್ಲಾ ಪಿಹೆಚ್.ಡಿ ನೆಟ್‌/ಕೆಸೆಟ್‌ ಮಾಡಿಕೊಂಡಿರುವವರಿಗೆ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿ ಆಗ ಎಲ್ಲವೂ ಸರಿ ಹೋಗುತ್ತದೆ ಅದನ್ನು ಬಿಟ್ಟು ಮಲತಾಯಿಧೋರಣೆಮಾಡುವುದು ಸರಿಯಲ್ಲ ಅಂತ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಉಪನ್ಯಾಸಕರ ನೇಮಕಾತಿ ಬಗ್ಗೆ ಶಿಕ್ಷಣ ಸಚಿವರ ಹೇಳಿಕೆಯಂತೂ ನಿರುದ್ಯೋಗಿಗಳಾಗಿರುವ ಪದವೀಧರರನ್ನು ಕೆರಳಿಸುವಂತೆ ಮಾಡಿದೆ. ಈ ಮೂಲಕ ಶಿಕ್ಷಣ ಸಚಿವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಯಾವ ಕಾರಣಕ್ಕೆ ಅತಿಥಿ ಉಪನ್ಯಾಸಕರಿಗೆ ನೇರ ನೇಮಕಾತಿಯಲ್ಲಿ ಶೇ. 50ರಷ್ಟು ಹುದ್ದೆಗಳನ್ನು ಅರ್ಹತೆ ಮಾನದಂಡದಲ್ಲಿ ಮನ್ನಣೆ ನೀಡುತ್ತಿದ್ದಾರೆ ಎನ್ನುವುದು ತಿಳಿಯದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos