ಗುಬ್ಬಿ ಗ್ರಾಮದಲ್ಲಿ ಋತುಚಕ್ರ ಗೊಡ್ಡುನಂಬಿಕೆ ಗ್ರಾಮಸ್ಥರಿಗೆ ಛೀಮಾರಿ ಹಾಕಿದ ತಹಶೀಲ್ದಾರ್..!

ಗುಬ್ಬಿ ಗ್ರಾಮದಲ್ಲಿ ಋತುಚಕ್ರ ಗೊಡ್ಡುನಂಬಿಕೆ ಗ್ರಾಮಸ್ಥರಿಗೆ ಛೀಮಾರಿ ಹಾಕಿದ ತಹಶೀಲ್ದಾರ್..!

ತುಮಕೂರು: ಬೆಂಗಳೂರಿಗೆ ಅಂಟಿಕೊಂಡಿರುವ ತುಮಕೂರು ಜಿಲ್ಲೆಗೆ 20 ಕಿಲೋಮೀಟರ್ ದೂರದಲ್ಲಿರುವ ಗುಬ್ಬಿ ತಾಲೂಕಿನ ಚಿಕ್ಕನೆಟ್ಟಗುಂಟೆ ಗ್ರಾಮದಲ್ಲಿ ಅಹಿತಕರ ಘಟನೆ ನಡೆದಿದೆ. ಗುಬ್ಬಿ ತಾಲೂಕಿನಲ್ಲಿ 17 ವಾರ್ಡುಗಳಿದ್ದು ಸಮಾನ ಸಂಖ್ಯಾ ಕೌನ್ಸಿಲರ್ ಗಳನ್ನು ಒಳಗೊಂಡಿದೆ ಗುಬ್ಬಿ ಪಟ್ಟಣದ 2011ರ ಜನಗಣತಿ ಪ್ರಕಾರ 18,457 ಜನಸಂಖ್ಯೆ ಇದ್ದು ಗುಬ್ಬಿ ಹಿಂದೆ ಅಮರಗೊಂಡ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಗ್ಯಾರೆಂಟಿಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಇಲ್ಲಿ ಮಹಿಳೆಯರನ್ನ ಗ್ರಾಮದಿಂದ ಹೊರಗಿಟ್ಟು ಮೌಢ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ.
ಇನ್ನು ಗ್ರಾಮದ ಅಂಗನವಾಡಿ ಶಿಕ್ಷಕಿ ಸುಜಾತ ಹಾಗೂ ಬಿಸಿಯೂಟದ ಕಾರ್ಯಕರ್ತೆ ಸಾವಿತ್ರಮ್ಮ ಜೊತೆಗೆ ಓರ್ವ ಮಹಿಳೆಯನ್ನು ಗ್ರಾಮದಿಂದ ಹೊರಗಿಟ್ಟು ಮೌಢ್ಯಾ ನಂಬಿಕೆಯನ್ನು ಆಚರಿಸಿದ್ದಾರೆ.
ಈ ಘಟನೆ ತಿಳಿದಕೂಡಲೇ ಗುಬ್ಬಿ ತಾಲೂಕಿನ ಚೆಕ್ಕನೆಟ್ಟಗುಂಟೆ ಗ್ರಾಮಕ್ಕೆ ತಹಶೀಲ್ದಾರ್ ಆರತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಂಗನವಾಡಿ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಾದರೂ ಬುದ್ಧಿ ಬಾರದೆ ಮತ್ತೆ ಮೌಡ್ಯವನ್ನೆ ಆಚರಿಸಿದ್ದಾರೆ,ಗೋಮೂತ್ರ ಚುಂಬಿಸಿ ಗ್ರಾಮಸ್ಥರು ಆ ಮಹಿಳೆಯರನ್ನು ಅವರವರ ಮನೆಯೊಳಕ್ಕೆ ಬಿಟ್ಟುಕೊಂಡಿದ್ದಾರೆ.
ಚಿಕ್ಕನೆಟ್ಟಗುಂಟೆ ಗ್ರಾಮಸ್ಥರು ಋತುಚಕ್ರವಾದ ಮಹಿಳೆಯರನ್ನು ಮೂರು ದಿನಗಳ ಕಾಲ ಊರಚೆ ಒಂದು ತಾತ್ಕಾಲಿಕ ಗುಡಿಸಿಲಿನಲ್ಲಿ ಹೊರಗಿಡುವ ಸಂಪ್ರದಾಯ ಮೊದಲಿನಿಂದ ಪಾಲಿಸಿಕೊಂಡು ಬಂದಿದ್ದಾರೆ. ಇಂತಹ ಆಧುನಿಕ ಸಮಾಜದಲ್ಲಿ ಯಾವುದೇ ನಾಚಿಕೆ ಇಲ್ಲದೆ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಇದಕ್ಕೆಲ್ಲ ಕಾರಣ ಶಿಕ್ಷಣದ ಕೊರತೆ ಎಂದು ನಾಗರಿಕರು ಮಾತಾಡಿಕೊಳ್ಳುತ್ತಿದ್ದಾರೆ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಶಿಕ್ಷಣಕ್ಕೆ ಅಲ್ಲಿ ಒತ್ತುಕೊಟ್ಟು ಸರ್ಕಾರದಿಂದ ಮೌಡ್ಯ ವಿರೋಧ ಕಾರ್ಯಕ್ರಮಗಳನ್ನು ಆಯೋಜಿಸಿ ಗೊಡ್ಡು ಸಂಪ್ರದಾಯ ಮೌಡ್ಯದಲ್ಲಿ ಮುಳುಗಿರುವ ಸಮಾಜವನ್ನು ಹೊರತರಲು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos