ಗ್ಯಾರಂಟಿ ಕೋಟ್ರೂ ದಿವಾಳಿಯಾಗಿಲ್ಲಾ ಸಿಎಂ!

ಗ್ಯಾರಂಟಿ ಕೋಟ್ರೂ ದಿವಾಳಿಯಾಗಿಲ್ಲಾ ಸಿಎಂ!

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಾವೇನು ಜನರಿಗೆ ಮಾತು ಕೊಟ್ಟಿದ್ವಿ ಐದನೇ ಗ್ಯಾರಂಟಿ ಯೋಜನೆ ಕಾರ್ಯಕ್ರಮ 2024 ಜನವರಿ 12 ಕ್ಕೆ ಪ್ರಾರಂಭವಾಗುತ್ತದೆ.  ಅದರಂತೆ ಕೊಟ್ಟ ಮಾತಿನಂತೆ ಇವತ್ತು ಚಾಲನೆಯನ್ನು ನಾವೆಲ್ಲ ಮಾಡಿದೀವಿ ನರೇಂದ್ರ ಮೋದಿಯವರು ಹೇಳಿದ್ದರು. ಚುನಾವಣಾ ಪೂರ್ವದಲ್ಲಿ ಈ ಗ್ಯಾರಂಟಿ ಗಳಿಗೆ ನಾವು ಜನಕ್ಕೆ  ಕೊಟ್ಟಂತಹ ವಚನಗಳು ಸಂದರ್ಭದಲ್ಲಿ ಈ ಗ್ಯಾರಂಟಿಗಳನ್ನು ಜಾರಿ ಮಾಡಕ್ಕಾಗಲ್ಲ. ಒಂದು ವೇಳೆ ಜಾರಿ ಮಾಡಿದರೆ ಕರ್ನಾಟಕ ಸರ್ಕಾರ ದಿವಾಳಿ ಆಗುತ್ತದೆ. ಈ ಮಾತುಗಳನ್ನು ಬೇರೆ ಯಾರು ಅಡಿರಲಿಲ್ಲ.

ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತ ಮಾತು.  ಒಬ್ಬ ಪ್ರಧಾನಮಂತ್ರಿ ನಾವು ಗ್ಯಾರೆಂಟಿಗಳನ್ನು ಈ ರಾಜ್ಯದ ಜನತೆಗೆ ಕೊಟ್ಟಾಗ ಅವರು ಹೇಳಿದಂತ ಮಾತು ಮಾಡಕ್ಕಾಗಲ್ಲ.  ಹನ್ನೆರಡು ವರ್ಷ ಮುಖ್ಯಮಂತ್ರಿ 10 ವರ್ಷ ಪ್ರಧಾನಮಂತ್ರಿ ಅವರು ಹೇಳಿದಂತ ಮಾತು. ರಾಜ್ಯ ಆರ್ಥಿಕವಾಗಿ ದಿವಾಳಿ ಆಗ್ಬುಡುತ್ತದೆ. ನರೇಂದ್ರ ಮೋದಿ ಜೀ ರಾಜ್ಯ ದಿವಾಳಿಯಾಗಿಲ್ಲ. 5 ಗ್ಯಾರಂಟಿಗಳನ್ನು ಬಹಳ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ.  ಗ್ಯಾರಂಟಿಗಳನ್ನು ಕೊಡಬಾರದು ಅಂತ ನರೇಂದ್ರ ಮೋದಿಯವರು ಹೇಳಿದ್ದರು. ಅವರೇ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ರು. ತೆಲಂಗಾಣದಲ್ಲಿ ಘೋಷಣೆ ಮಾಡಿದ್ರು.

ನರೇಂದ್ರ ಮೋದಿಯವರು ಯಾವುದನ್ನು ನಮಗೆ ಘೋಷಣೆ ಮಾಡಬೇಡಿ ಅಂತ ಹೇಳಿದ್ರು ಆರ್ಥಿಕವಾಗಿ ದಿವಾಳಿ ಆಗ್ಬಿಡ್ತೀವಿ ರಾಜ್ಯ ಅಂತ ಹೇಳಿದ್ರು.  ನಾನು ಇವತ್ತು  ಹೇಳ್ತಿದೀನಿ ಆರ್ಥಿಕವಾಗಿ ಕರ್ನಾಟಕ ರಾಜ್ಯ ಈ ಗ್ಯಾರಂಟಿಗಳನ್ನು ಜಾರಿ ಮಾಡಿದ ಮೇಲೂ ಸದೃಢವಾಗಿದೆ,  ದಿವಾಳಿಯಾಗಿಲ್ಲ. ಇದು ಈ ರಾಜ್ಯದ ಜನತೆಗೆ ದೇಶದ ಪ್ರಧಾನಮಂತ್ರಿಯವರಿಗೆ ಹೇಳಲು ಬಯಸುತ್ತೇನೆ.

ಫ್ರೆಶ್ ನ್ಯೂಸ್

Latest Posts

Featured Videos