ಹಾಸನದಲ್ಲಿ ಗೃಹಣಿ ಅನುಮಾನಾಸ್ಪದ ಸಾವು!

ಹಾಸನದಲ್ಲಿ ಗೃಹಣಿ ಅನುಮಾನಾಸ್ಪದ ಸಾವು!

ಹಾಸನ, ಮೇ. 13, ನ್ಯೂಸ್ ಎಕ್ಸ್ ಪ್ರೆಸ್: 3ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ನಗರದ ಶಂಕರಿಪುರಂನಲ್ಲಿ ಎಂ.ಕೆ ಅಶ್ವಿನಿ ಮನೆಯಲ್ಲಿಯೇ ಅನುಮಾನಸ್ಪದವಾಗಿ ಸಾವನ್ನಪ್ಪಿದ ಗೃಹಣಿ.

ಮೂರೂವರೆ ವರ್ಷದ ಹಿಂದೆ ಆದಿತ್ಯ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಆದಿತ್ಯನಿಗೆ ವ್ಯವಹಾರದಲ್ಲಿ ನಷ್ಟವಾದ ಬಳಿಕ ಆತ ಅಶ್ವಿನಿಗೆ ಪ್ರತಿನಿತ್ಯ ತವರು ಮನೆಯಿಂದ ಹಣ ತರುವಂತೆ ಅಶ್ವಿನಿಗೆ ಕಿರುಕುಳ ನೀಡುತ್ತಿದ್ದನು ಎಂದು ಅಶ್ವಿನಿ ಪೋಷಕರು ಆರೋಪಿಸಿದ್ದಾರೆ.  ಅಶ್ವಿನಿ ಮೃತಪಟ್ಟ ಬಳಿಕ ಆದಿತ್ಯ , ಆತನ ತಂದೆ ನಾಗೇಶ್ ನಾಪತ್ತೆಯಾಗಿದ್ದು, ಮತ್ತಷ್ಟು ಅನುಮಾನಕ್ಕೀಡು ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos