ಗಿಡ ಬೆಳೆಸಿ ಬರ ಓಡಿಸಿ

ಗಿಡ ಬೆಳೆಸಿ ಬರ ಓಡಿಸಿ

ಪಾವಗಡ: ಬರದಿಂದ ಪಾವಗಡ ಮುಕ್ತಿ ಹೊಂದಲು ಗಿಡಮರ ಬೆಳೆಸಬೇಕೆಂದು ವಿಷ್ಣುಸೇನಾ ಸಮಿತಿ ರಾಜ್ಯಾಧ್ಯಕ್ಷ ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಮಂಗಳವಾಡ ಗ್ರಾಮದ ತಿರುಮಲ ಪ್ರೌಢಶಾಲೆಯ ಆವರಣದಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಮಾಡುವಂತ ಜವಾಬ್ದಾರಿ, ಹಿಂದೆಂದಿಗಿಂತಲೂ ಇಂದು ಪ್ರತಿಯೊಬ್ಬರಿಗೂ ಪರಿಸರ ಕಾಪಾಡುವುದು ಅತಿ ಅವಶ್ಯಕವಿದೆ ಎಂಬುದನ್ನು ಈಗ ನಾವು ಅರಿತಿದ್ದೇವೆ.
ಹವಾಮಾನ ವೈಪರಿತ್ಯದಿಂದ ಮಳೆಯಾಗದೆ ಬಿರುಗಾಳಿ ಮಹಾಪೂರ ಹೆಚ್ಚಾಗುವುದಕ್ಕೆ ಪರಿಸರ ಸಂರಕ್ಷಣೆ ಕಾಪಾಡದಿರುವುದೇ ಮುಖ್ಯ ಕಾರಣವಾಗಿದ್ದು, ಅವುಗಳ ಸಂರಕ್ಷಣೆ ಎಲ್ಲರಲ್ಲೂ ಬರಬೇಕಿದೆ. ವಿಷ್ಣುಸೇನಾ ಸಮಿತಿ ವತಿಯಿಂದ ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೂ ೧೮ ಸಾವಿರ ಸಸಿಗಳನ್ನು ನೆಟ್ಟಿದ್ದು, ಈ ವರ್ಷಾಂತ್ಯದಲ್ಲಿ ೨೦ ಸಾವಿರ ಸಸಿಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಲಕ್ಷ್ಮೀ, ಮಂಜು ಸ್ಟುಡಿಯೋ ಕೃಷ್ಣಮೂರ್ತಿ, ಚಿತ್ತಗಾನಹಳ್ಳಿ ಚಂದ್ರು, ಕನ್ನಮೇಡಿ ಸುರೇಶ್ ಮತ್ತಿತರರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos