ಕನ್ನಡ ಬೆಳೆಸಿ ಕನ್ನಡ ಉಳಿಸಿ

ಕನ್ನಡ ಬೆಳೆಸಿ ಕನ್ನಡ ಉಳಿಸಿ

ಕೆರ್ ಪುರ, ಸೆ. 28: ಕನ್ನಡ ಅನಿವಾರ್ಯ ಎಂಬ ಭಾವನೆಯಲ್ಲಿ ಭಾಷೆಯನ್ನು ಬಳಸಿ ಬೆಳೆಸಿದಾಗ ಖಂಡಿತ ಕನ್ನಡ ಉಳಿಯುತ್ತದೆ‌ ಎಂದು ಸುಕ್ಷೇತ್ರ ಪೀಠಾಧ್ಯಕ್ಷರಾದ ಶ್ರೀ ಬಸವರಮಾನಂದ ಸ್ವಾಮಿ ಆಗ್ರಹಿಸಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಗುಂಡೂರಿನ ಶ್ರೀಕೃಷಾಂಜನೇಯ ದೇವಾಲಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಂಭ್ರಮ ಹಾಗು ಲೇಖಕ ಎಂ.ಆರ್.ಉಪೇಂದ್ರ ರವರ ಉಡುಗೊರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ನಾನಾ ಭಾಷೆಮಾತನಾಡೊ ಸಹೋದರರಿದ್ದಾರೆ ಅವರು ಅವರಾವರ ಭಾಷೆಯನ್ನು ಮನೆಯಲ್ಲಿ ಮಾತನಾಡಲ್ಲಿ, ಕರ್ನಾಟಕದಲ್ಲಿ ಕನ್ನಡವನ್ನು ಮಾತನಾಡಲಿ. ಕನ್ನಡ ಬರದವರು ಕನ್ನಡ ಕಲಿಯಲಿ,‌ ಕನ್ನಡತಾಯಿನ ಗೌರವಿಸಬೇಕು, ಕನ್ನಡ ಅನಿವಾರ್ಯವೆಂಬ ಭಾವನೆಯಲ್ಲಿ ಭಾಷೆ ಬಳಸಿ ಬೆಳೆಸಿದಾಗ ಖಂಡಿತ ಕನ್ನಡ ಉಳಿಯುವುದರಲ್ಲಿ ಸಂಶಯವಿಲ್ಲ ಎಂದರು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಎಂ.ಆರ್. ಉಪೇಂದ್ರ ಕುಮಾರ್ ಅವರ 2ನೇ ಕೃತಿ ಉಡುಗೊರೆ ಪುಸ್ತಕ ಲೋಕಾರ್ಪಣೆ ಮಾಡಲಾಯಿತು.‌ ಹಾಗೂ ಅಜಿತ್ ಕುಮಾರ್ ಮತ್ತು ಕಸಾಪ ಪದಾಧಿಕಾರಿಗಳಿಂದ ಭಕ್ತಿಗೀತೆ, ಭಾವಗೀತೆ, ಭಜನೆಯನ್ನು ಸಹ ಆಯೋಜಿಸಿದರು.

ಇದೇವೇಳೆ ಕಾರ್ಯಕ್ರಮದಲ್ಲಿ ಮಹದೇವಪುರ ಕ್ಷೇತ್ರ ಕಸಾಪ ಅಧ್ಯಕ್ಷ ಡಾ.ಅಜಿತ್ ಕುಮಾರ್, ಖ್ಯಾತ ಕಲಾವಿದರಾದ ಶಶಿಧರ್ ಕೋಟೆ, ಕಸಾಪ ಬೆ.ನಗರ ಜಿಲ್ಲೆ ಉಪಾಧ್ಯಕ್ಷ ಡಾ.ಬಿ.ಎಲ್.ಮಂಜುನಾಥ್, ಬರಹಗಾರ  ಎಂ.ಆರ್.ಮಲ್ಲಿಕಾರ್ಜುನ, ಸ್ಥಳೀಯ ಮುಖಂಡರಾದ ಧನುಂಜಯ, ಕಾಂತಮ್ಮ, ಬಸಪ್ಪ, ವೆಂಕಟೇಶಪ್ಪ ಮುಂತಾದವರು ಉಪಸ್ಥಿತರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos