‘ಗೃಹಲಕ್ಷ್ಮಿ’ ಬಾಕಿ ಹಣ ಬಿಡುಗಡೆ

‘ಗೃಹಲಕ್ಷ್ಮಿ’ ಬಾಕಿ ಹಣ ಬಿಡುಗಡೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ 1.10 ಕೋಟಿ ಮಹಿಳೆಯರಿಗೆ 2,000 ರೂ. ನೀಡಲಾಗುತ್ತಿದ್ದು, ಬಾಕಿ ಉಳಿದಿದ್ದ ಫಲಾನುಭವಿಗಳಿಗೆ ಹಣ ಜಮಾ ಆಗಿದೆ.

ಹೌದು, ಯಜಮಾನಿಯರ ಪೆಂಡಿಂಗ್ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಹಲವರ ಖಾತೆಗೆ ಹಣ ಜಮಾ ಆಗಿದೆ.

ನಿಮ್ಮ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ನಲ್ಲಿ ಚೆಕ್ ಮಾಡಿಕೊಳ್ಳಿ. ನಮಗೆ ಎಸ್ ಎಂ ಎಸ್ ಬಂದಿಲ್ಲ..ಹಣ ಬಂದಿರುತ್ತಾ..? ಎಂಬ ಅನುಮಾನವಿದ್ದರೆ..ಅದು ತಾಂತ್ರಿಕ ಸಮಸ್ಯೆಗಳಿಂದ ಎಸ್ ಎಂ ಎಸ್ ಬರದೇ ಇರಬಹುದು.ನೀವು ಬ್ಯಾಂಕ್ ಗೆ ಹೋಗಿ ಖಾತೆ ಪರಿಶೀಲಿಸಿಕೊಳ್ಳಬಹುದು.

ಮೊದಲ ಕಂತಿನ ಹಣವನ್ನು ಸೇರಿಸಿ ಮೂರು ಕಂತಿನ ಹಣ ಅಂದರೆ 6,000ಗಳನ್ನು ಇದುವರೆಗೆ ಯಾರೂ ಪಡೆದುಕೊಂಡಿಲ್ಲವೂ ಅಂತಹ ಫಲಾನುಭವಿ ಮಹಿಳೆಯರ ಖಾತೆಗೂ ವರ್ಗಾವಣೆ ಮಾಡಲಾಗುವುದು. ಯಜಮಾನಿಯರ ಬ್ಯಾಂಕ್ ಖಾತೆಯಲ್ಲಾದ ಹಲವು ತಾಂತ್ರಿಕ ದೋಷಗಳು ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಬಂದಿಲ್ಲ.

ಅಂಗನವಾಡಿ ಸಹಾಯಕಿಯರು ಪ್ರತಿ ಮನೆಗೆ ಹೋಗಿ ಮಹಿಳೆಯರ ಖಾತೆಯಲ್ಲಿ ಸಮಸ್ಯೆ ಇದ್ದರೆ ಮಹಿಳೆಯರನ್ನು ನೇರವಾಗಿ ಬ್ಯಾಂಕಿಗೆ ಕರೆದುಕೊಂಡು ಹೋಗಿ ತಾವೇ ಸ್ವತಃ ಸಮಸ್ಯೆ ಪರಿಹರಿಸಬೇಕಾಗಿಯೂ ಕೂಡ ಸರ್ಕಾರ ಸೂಚಿಸಿದೆ. ಡಿಸೆಂಬರ್ ವೇಳೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ಬರುವ ನಿರೀಕ್ಷೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos