ಗ್ರೀನ್‌ಬಿಲ್ಡಿಂಗ್ ಅಂಡ್ ಟೆಕ್ನಾಲಜಿ ಕಾರ್ಯಾಗಾರ

ಗ್ರೀನ್‌ಬಿಲ್ಡಿಂಗ್ ಅಂಡ್ ಟೆಕ್ನಾಲಜಿ ಕಾರ್ಯಾಗಾರ

ಬೆಂಗಳೂರು, ನ. 9: ಸೆಂಟರ್ ಫಾರ್ ಗ್ರೀನ್ ಬಿಲ್ಡಿಂಗ್ ಮತ್ತು ಟೆಕ್ನಾಲಜಿ (ಸಿಜಿಬಿಎಂಟಿ) ವತಿಯಿಂದ  ೧೫ನೇ ವರ್ಷದ ಸಸ್ಟೆನಬಲ್ ಲಿವಿಂಗ್-2  ಉದ್ಘಾಟನಾ  ಕಾರ್ಯಾಗಾರವನ್ನು ನ. 10 ರಂದು ಬೆಳಗ್ಗೆ ಏರ್ಪಡಿಸಲಾಗಿದೆ ಎಂದು ಸಿಜಿಬಿಎಂಟಿ ಸಂಸ್ಥಾಪಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಲಮ್ ಮಂಜುನಾಥ್ ತಿಳಿಸಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಹಂಕದಲ್ಲಿರುವ ಬಿಎಂಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಬೆಳಿಗ್ಗೆ 1೦ ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.

ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಪರಿಸರ ಪ್ರಜ್ಞೆಯ ಸಂಶೋಧನೆ ಚಾಲಿತ ಶಿಕ್ಷಣ ಮತ್ತು ಸಹಯೋಗಗಳಿಗೆ ಒತ್ತು ನೀಡುವ ವಾಸ್ತುಶಿಲ್ಪ ಶಿಕ್ಷಣಕ್ಕೆ ಬಿಎಂಎಸ್‌ಎಸ್‌ಎ ನೂತನ ವಿಧಾನವನ್ನು ಪರಿಚಯಿಸುತ್ತಿರುವುದಾಗಿ ತಿಳಿಸಿದರು.

ಪಠ್ಯಕ್ರಮದ ಅಧ್ಯಯನದ ಭಾಗವಾಗಿ ಸುಸ್ಥಿರ ಹಸಿರು ಕಟ್ಟಡ ತಂತ್ರಜ್ಞಾನಗಳು ಮತ್ತು ಪರಿಸರ ಸ್ನೇಹಿ ವಸ್ತುಗಳ ಜ್ಞಾನವನ್ನು ಪರಿಚಯಿಸುವ ಮೂಲಕ ಭವಿಷ್ಯದ ಪೀಳಿಗೆಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವುದೇ ನಮ್ಮ ಸಂಸ್ಥೆಯ ಧ್ಯೇಯ ಎಂದರು.

ಮುಖ್ಯ ಅತಿಥಿಗಳಾಗಿ ಎಕೋಲಜಿಕಲ್ ಸೆಕ್ಯುರಿಟಿ ಫೌಂಡೇಶನ್ ಸಂಸ್ಥೆಯ ಕೌನ್ಸಿಲ್ ಮೆಂಬರ್ ನಿವೃತ್ತ ಇಎಫ್‌ಎಸ್ ಅಧಿಕಾರಿ ಡಾ.ಯಲ್ಲಪ್ಪರೆಡ್ಡಿ, ಎಕೋಲಾಜಿಕಲ್ ಫೌಂಡೇಶನ್ ಆಫ್ ಇಂಡಿಯಾ ನವದೆಹಲಿಯ ವಿಶೇಷ ಕಾರ್ಯದರ್ಶಿ ಶಿವಶೈಲಂ, ಬಿಎಂಎಸ್‌ಐಟಿ ಮತ್ತು ಬಿಎಂಎಸ್‌ಎಸ್‌ಎ ಟ್ರಸ್ಟಿ ಹಾಗೂ ಬಿಎಂಎಸ್‌ಇಟಿ ಹೆಚ್ಚುವರಿ ಮುಖ್ಯ ನಿವೃತ್ತ ಕಾರ್ಯದರ್ಶಿ ಎಂ.ಮದನ್ ಗೋಪಾಲ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos