ಅನುದಾನ ಕಡಿತ: ರಾಮಲಿಂಗಾರೆಡ್ಡಿ ಆಕ್ರೋಶ

ಅನುದಾನ ಕಡಿತ: ರಾಮಲಿಂಗಾರೆಡ್ಡಿ ಆಕ್ರೋಶ

ಬೆಂಗಳೂರು, ಸೆ. 26: ನಗರದ ವಿವಿಧ ಕಟ್ಟಡಗಳನ್ನು ಅಡವಿಟ್ಟು ಒಂಭತ್ತು ಸಾವಿರ ಕೋಟಿ ರೂ. ಸಾಲ ಮಾಡಿದ್ದ ಬಿಜೆಪಿ ಸರ್ಕಾರ ಮತ್ತೆ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಶಾಸಕರಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಆಗಿದ್ದ ಅನುದಾನ ವಾಪಸ್ ಪಡೆದಿರುವುದು ಸಂವಿಧಾನಾತ್ಮಕವಾಗಿ ಆಯ್ಕೆಯಾದ ಶಾಸಕರಿಗೆ ಮಾಡಿರುವ ಅವಮಾನವೆಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ಸರ್ಕಾರದ ವಿರುದ್ದ ಕಿಡಿ ಕಾರಿದರು.

ಇಂದು ನಗರದ ಟೌನ್‌ಹಾಲ್‌ನ ಪಟ್ಟಣ್ಣಚೆಟ್ಟಿ ಪುರಭವನದ ಮುಂಭಾಗ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿ ಸರ್ಕಾರ ಮಾಡಿದ್ದ ಒಂಭತ್ತು ಸಾವಿರ ಕೋಟಿ ಸಾಲ ತೀರಿಸಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ. ಆದರೆ, ನಾಲ್ಕೈದು ಜನ ಸೇರಿಕೊಂಡು ಹಳೆ ಕಾಮಗಾರಿಗಳಿಗೆ ಹೊಸ ಬಿಲ್ ಪಾವತಿ ಮಾಡಲಾಗುತ್ತಿದೆ ಎಂದು ನೇರ ಆರೋಪ ಮಾಡಿದರು.

ನಾವೇ ನಮ್ಮ ಕ್ಷೇ

ತ್ರದಲ್ಲಿ ಸರ್ವೇ ಮಾಡಿ ಎಲ್ಲೆಲ್ಲಿ ಅಕ್ರಮ ನಡೆದಿ

ದೆ ಎಂಬುದನ್ನು ಇಂಚಿಂಚೂ ಬಯಲಿಗೆಳೆಯುತ್ತೇವೆ ಎಂದರು. ಸಾರ್ವಜನಿಕರು ಕಟ್ಟುವ ತೆರಿಗೆ ಹಣ ಪೋಲಾಗಲು ಬಿಡುವುದಿಲ್ಲ ಎಂದ ರಾಮಲಿಂಗಾರೆಡ್ಡಿ, ನಮ್ಮ ಶಾಸಕರ ಅನುದಾನ ಕಡಿತಗೊಳಿಸಿ ಯಾವ್ಯಾವ ಶಾಸಕರಿಗೆ ಹಂಚಿಕೊಂಡಿರುವುದೆಲ್ಲಾ ಗೊತ್ತಿದ್ದು, ಎಲ್ಲೆಲ್ಲಿ ಎಷ್ಟೆಷ್ಟು ಕಮಿಷನ್ ಹಣ ಪಡೆಯಲಾಗುತ್ತಿದೆ

ಎಂಬುದನ್ನು ಬಯಲಿಗೆಳೆದು ಬಿಜೆಪಿ ಸರ್ಕಾರದ ನಿಜ ಸ್ವರೂಪ ರಾಜ್ಯದ ಜನತೆಯ ಮುಂದಿಡುವುದಾಗಿ ಸವಾಲು ಹಾಕಿದರು.

ಕಾಂಗ್ರೆಸ್ ಶಾಸಕರ ಅನುದಾನದಡಿ ಬಿಡುಗಡೆಯಾಗಿದ್ದ ನೂರಾರು ಕೋಟಿ ಹಣ ವಾಪಸ್ ಪಡೆದು ಅಧಿಕಾರ ಹಿಡಿಯಲು ನೆರವಾದವರಿಗೆ ಅನುಕಂಪದ ರೂಪದಲ್ಲಿ ನೆರವು ನೀಡಲಾಗಿದೆ ಎಂದ ರಾಮಲಿಂ

ಗಾರೆಡ್ಡಿ,  ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಅನುದಾನ ಕಡಿತ ಮಾಡಿರುವುದರ ವಿರುದ್ದ ಉಗ್ರ ಹೋರಾಟಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದರು.

ಮಾಜಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ನಿಷ್ಠಾವಂತೆ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ರೋಹಿಣಿ ಸಿಂಧೂರಿ ಮುಖ್ಯಮಂತ್ರಿಗಳ ಕಾರ್ಮಿಕರ ನಿಧಿ ಹಣ ನೀಡಲು ಒಪ್ಪಿಗೆ ನೀಡದಿದ್ದಕ್ಕೆ ನಕಲಿ ಕಾರ್ಮಿಕರ ಗುಂಪನ್ನು ಎತ್ತಿ ಕಟ್ಟಿ ದೂರು ಪಡೆದು, ರೇಷ್ಮೆ ಇಲಾಖೆಗೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. 700 ಕೋಟಿ ರೂ. ಕಾರ್ಮಿಕ ಕಲ್ಯಾಣ ನಿಧಿ ಹಣವನ್ನು ಮುಖ್ಯಮಂತ್ರಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿದರು.

ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ನಗರದ 28 ಕ್ಷೇತ್ರದ ಎಲ್ಲಾ ಶಾಸಕರಿಗೂ ಸಮಾನವಾಗಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಬಿಟಿಎಂ ಲೇಔಟ್ ಶಾಸಕರಾದ ರಾಮಲಿಂಗಾರೆಡ್ಡಿ ಹಾಗೂ ಇತರ ನಗರ ಕಾಂಗ್ರೆಸ್ ಶಾಸಕರ ಅನುದಾನ ಕಡಿತ ಮಾಡಿ ಯಡಿಯೂರಪ್ಪ ಪಕ್ಷಪಾತ ಮಡುತ್ತಿದ್ದಾರೆಂದು ಹೆಚ್.ಎಂ.ರೇವಣ್ಣ ಆರೋಪಿಸಿದರು.

ಎಂಎನ್‌ಸಿ ಕಂಪನಿಗಳನ್ನು ಉದ್ದಾರ ಮಾಡಲು ಕೇಂದ್ರ ಬ್ಯಾಂಕ್‌ ನಲ್ಲಿದ ಒಂದು ಲಕ್ಷ ಎಪ್ಪತ್ತು ಸಾವಿರ ಕೋಟಿ ನೀಡಲಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ನಮ್ಮ ದೇಶದಲ್ಲಿ ವಿದೇಶಿಯರು ಹೂಡಿಕೆ ಮಾಡಿದ್ದ

ಐದುನೂರಾ ಇಪ್ಪತ್ತು ಲಕ್ಷ ಕೋಟಿ ಹಣ ವಾಪಸ್ ಪಡೆದುಕೊಂಡಿದ್ದಾರೆ ಎಂದರೆ ಮೋದಿ ಆಡಳಿತದ ಬಗ್ಗೆ ವಿದೇಶೀಯರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರ್ಥ. ಇಂತಹವರ ಅಧಿಕಾರ ನಮ್ಮ ದೇಶಕ್ಕೆ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.

ಸಚಿವ ಆರ್. ಅಶೋಕ್ ಇಷ್ಟೊತ್ತಿಗೆ ಜೈಲು ಸೇರಬೇಕಿತ್ತು. ಮೋದಿ ಮತ್ತು ಅಮಿತ್‌ ಶಾ ಅವರಿಗೆ ಜೈಕಾರ ಹಾಕಿದರೆ ಉಳಿಗಾಲ ಇಲ್ಲವೇ ಜೈಲು ಎಂಬ ಸಿದ್ಧಾಂತದಡಿ ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇಪ್ಪತ್ತು ಕೋಟಿ ಲಂಚದ ಹಣ ಚೆಕ್ ರೂಪದಲ್ಲಿ ಪಡೆದು ಜೈಲು ಸೇರಿದ್ದ ಯಡಿಯೂರಪ್ಪ ಮತ್ತೆ ಜೈಲು ಸೇರೋದು ಗ್ಯಾರಂಟಿ. ಸುತ್ತಲೂ ಮೋದಿ ಮತ್ತು ಅಮಿತ್ ಶಾ ತಮ್ಮ ನಿಕಟವರ್ತಿಗಳನ್ನು ಬಿಟ್ಟು ಯಡಿಯೂರಪ್ಪರ ಮಗ್ಗಲು ಮುರಿಯಲು ಹೊಂಚು ಹಾಕಿದ್ದಾರೆಂದು ಎಚ್ಚರಿಕೆ ನೀಡಿದರು.

ಶಾಸಕಿ ಸೌಮ್ಯರೆಡ್ಡಿ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮಾಜಿ ಮೇಯರ್ ಜಿ.ಮಂಜುನಾಥ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ರಾಜ್ಯ ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಹಾಕುತ್ತಾ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

 

 

 

 

ಫ್ರೆಶ್ ನ್ಯೂಸ್

Latest Posts

Featured Videos