ಬಿದ್ದು ಮಗು ಸಾವು

ಬಿದ್ದು ಮಗು ಸಾವು

ನ.25 : ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಅಜ್ಜಿಯ ಮಡಿಲಿನಿಂದ 9 ತಿಂಗಳ ಮಗು ಜಾರಿ ಬಿದ್ದು ಮೃತಪಟ್ಟ ದಾರುಣ ಘಟನೆ ದೆಹಲಿಯಯ ಜಿಟಿಬಿ ಆಸ್ಪತ್ರೆಯ ಎದುರು ನಡೆದಿದೆ.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಗಾಜಿಯಾಬಾದ್ನ ಮಗುವನ್ನು ಮಗುವಿನ ಚಿಕ್ಕಪ್ಪನ ದ್ವಿಚಕ್ರ ವಾಹನದಲ್ಲಿ ಅಜ್ಜಿ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಗುವಿನ ತಂದೆ ಅನಾರೋಗ್ಯ ಹೊಂದಿದ್ದು, ಅವರ ಆರೈಕೆಯಲ್ಲಿ ತಾಯಿ ಇದ್ದುದರಿಂದ ಮಗುವನ್ನು ಅಜ್ಜಿ ಕರೆದೊಯ್ದಿದ್ದಳು.
ಪೊಲೀಸರ ಪ್ರಕಾರ, ಬೈಕ್ ಆಸ್ಪತ್ರೆ ಪ್ರವೇಶಿಸುವ ವೇಳೆ ಕಾರು ಹೊರ ಬರುತ್ತಿತ್ತು. ಆಗ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡಿದ್ದು, ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಅಜ್ಜಿಯ ಮಡಿಲಿನಿಂದ ಮಗು ಬಿದ್ದಿದೆ. ತಕ್ಷಣ ಮಗುವನ್ನು ವೈದ್ಯರಲ್ಲಿ ಕರೆದೊಯ್ಯಲಾಗಿದ್ದು, ಅದಾಗಲೇ ಮಗು ಮೃತಪಟ್ಟಿತ್ತು.

ಫ್ರೆಶ್ ನ್ಯೂಸ್

Latest Posts

Featured Videos