ಗ್ರಾಮದೇವತೆಗ ಅದ್ದೂರಿ ಉತ್ಸವ

ಗ್ರಾಮದೇವತೆಗ ಅದ್ದೂರಿ ಉತ್ಸವ

ಕೆ.ಆರ್.ಪುರ, ಅ. 8: ನಾಡಿನಾದ್ಯಂತ ದಸರಾ ಹಬ್ಬ ವಿಜೃಂಭಣೆಯಿಂದ ನಡೆಯುತ್ತಿದ್ದು ಅದರಂತೆ ಕ್ಷೇತ್ರದ ಹೊರಮಾವು ಗ್ರಾಮದಲ್ಲಿ ಗ್ರಾಮದೇವತೆಗಳಾದ  ಮಾರಮ್ಮ ದೇವಿ ಹಾಗೂ ಏಲ್ಲಮ್ಮ ದೇವಿಯ ಉತ್ಸವ ಅದ್ದೂರಿಯಾಗಿ ನಡೆಯಿತು.

ಪ್ರತಿವರ್ಷದಂತೆ ಈ ವರ್ಷವು ನವರಾತ್ರಿ ಉತ್ಸವದ ಅಂಗವಾಗಿ ಎಂಟು ದಿನಗಳ ವಿಶೇಷ ಪೂಜೆಯ ನಂತರ ಗ್ರಾಮದೇವತೆಗಳ ಉತ್ಸವ ಅದ್ದೂರಿ ಯಾಗಿ ಇಂದು ನೇರವೇರುತ್ತಿದ್ದು, ಬಾಳೆ ಮರ ಕತ್ತರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುವ ಉತ್ಸವ ಪೂಜಾ ಅವನಗಳ ಮೂಲಕ ಗ್ರಾಮಸ್ಥರು ತಮ್ಮ ಇಷ್ಟಾರ್ಥಗಳ ಸಿದ್ದಿಗೆ ಪ್ರಾರ್ಥನೆ ಸಲ್ಲಿಸುವುದು ವಾಡಿಕೆಯಾಗಿದೆ .

ಬಾಣಸವಾಡಿಯ ಗಂಗಮ್ಮ ದೇವಿ ಉತ್ಸವ ಪ್ರತಿವರ್ಷ ದಂತೆ ಗ್ರಾಮದ ಮಾರಮ್ಮ ದೇವಿ ಹಾಗೂ ಏಲಮ್ಮ ದೇವಲಯಕ್ಕೆ ತಲುಪಿ ವಿಶೇಷ ಪೂಜೆ ಸ್ವಿಕರಿಸುವುದು ವಿಶೇಷ ವಾಗಿದೆ.

ಈ ಉತ್ಸವಕ್ಕೆ ಜಯಂತಿನಗರ,  ಚಿಕ್ಕಪುಳ್ಳಪ್ಪಬಡಾವಣೆ, ಬಾಣಸವಾಡಿ, ಆರ್ಶಿವದ ಕಾಲೋನಿ, ರಾಂಪುರ, ಕಲ್ಕರೆ, ರಾಮಮೂರ್ತಿ ನಗರ, ಬೈರತಿ, ಕೆ.ನಾರಾಯಣಪುರ, ಅಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos