ಪದವಿ ಪಡೆಯುವುದು ಮುಖ್ಯವಲ್ಲ ಜೀವನಾನುಭವ ಮುಖ್ಯ: ಎನ್.ಎಸ್.ಹೆಗಡೆ

ಪದವಿ ಪಡೆಯುವುದು ಮುಖ್ಯವಲ್ಲ ಜೀವನಾನುಭವ ಮುಖ್ಯ: ಎನ್.ಎಸ್.ಹೆಗಡೆ

ದೊಡ್ಡಬಳ್ಳಾಪುರ, ನ. 05: ವಿದ್ಯಾರ್ಥಿಗಳು ಪದವಿ ಪತ್ರಗಳನ್ನು ಪಡೆಯುವುದು ಮುಖ್ಯವಲ್ಲ ಜೀವನಾನುಭವದ ಜೊತೆ ವೃತ್ತಿಪರತೆಯನ್ನು ಹೊಂದಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಎನ್.ಎಸ್.ಹೆಗಡೆ ಹೇಳಿದರು.

ನಾಗದೇನಹಳ್ಳಿಯ ಗೀತಂ ವಿಶ್ವವಿದ್ಯಾಲಯದ ಘಟಿಕೋತ್ಸವ ಮತ್ತು ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ದೇಶದಲ್ಲಿ ಪ್ರತಿ ವರ್ಷ 30 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದು, ಅವರಿಗೆ ಸೂಕ್ತ ಉದ್ಯೋಗ ಕಲ್ಪಿಸಲು ಸಾದ್ಯವಾಗುತ್ತಿಲ್ಲ ಎಂದ ಅವರು ವಿದ್ಯಾರ್ಥಿಗಳು ಕೇವಲ ಪುಸ್ತಕದ ಕಲಿಕೆಯನ್ನು ಪಡೆದು ಸಮಾಜದಲ್ಲಿ ಏನನ್ನೂ ಸಾದಿಸಲು ಸಾದ್ಯವಿಲ್ಲ. ಸಮಾಜದ ಆಗುಹೋಗುಗಳಿಗೆ ದ್ವನಿಯಾಗುವ ಮೂಲಕ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಙಾನಿ ಕುನಿಕೃಷ್ಣನ್,ಯೂನಿವರ್ಸಿಟಿ  ಚಾನ್ಸಲರ್ ರಾಮಕ್ರಿಷ್ಣರಾವು, ವೈಸ್ ಚಾನ್ಸಲರ್ ಶಿವರಾಮಕ್ರಿಷ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos