ಗ್ರಾಮಗಳಲ್ಲಿ ಇಂದು ದೀಪಾವಳಿ ಇಲ್ಲ

ಗ್ರಾಮಗಳಲ್ಲಿ ಇಂದು ದೀಪಾವಳಿ ಇಲ್ಲ

ಚಾಮರಾಜನಗರ, ಅ.  29 : ದೇಶದೆಲ್ಲೆಡೆ ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಿ ಸಂಭ್ರಮಿಸಿದರೆ ಇಲ್ಲಿ ಆರು ಗ್ರಾಮಗಳಲ್ಲಿ ಮಾತ್ರ ದೀಪಾವಳಿಯನ್ನು ಮಂಗಳವಾರ ಆಚರಣೆ ಮಾಡುವ ಬದಲು ಬುಧವಾರಕ್ಕೆ ಮುಂದೂಡಿವೆ. ಬುಧವಾರ ಬಿಟ್ಟು ಬೇರೆ ದಿನಗಳಲ್ಲಿ ಹಬ್ಬ ಬಿದ್ದರೂ ಈ ಗ್ರಾಮಗಳಲ್ಲಿ ಬುಧವಾರವೇ ಹಬ್ಬ ಆಚರಿಸುವುದು ಸಂಪ್ರದಾಯವಾಗಿದೆ. ತಾಲ್ಲೂಕಿನ ಮಾಡ್ರಹಳ್ಳಿ, ಬನ್ನಿತಾಳಪುರ, ನೇನೆಕಟ್ಟೆ, ಮಳವಳ್ಳಿ, ವೀರನಪುರ, ಇಂಗಲವಾಡಿ ಗ್ರಾಮಗಳಲ್ಲಿ ಹಬ್ಬ ಮಂಗಳವಾರ ಬಿದ್ದ ಕಾರಣ ಬುಧವಾರ ಆಚರಣೆ ಮಾಡುತ್ತಾರೆ ಇದು ದೀಪಾವಳಿಗೆ ಮಾತ್ರ ಸೀಮಿತವಲ್ಲ.

ಯುಗಾದಿ ಹಬ್ಬವನ್ನು ಬುಧವಾರವಷ್ಟೇ ಆಚರಿಸುವ ಸಂಪ್ರದಾಯ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ . ಈ ಹಿಂದೆ ಬೆಂಡಗಳ್ಳಿ ಮತ್ತು ನೆಲ್ಲೂರು ಗ್ರಾಮಗಳು ಸಹ ಮೇಲ್ಕಂಡ ಗ್ರಾಮಗಳೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದವು. ಆದರೆ ನಲ್ಲೂರು ಗ್ರಾಮವೇ ನಶಿಸಿ ಹೋದ ಕಾರಣ, ಬೆಂಡಗಳ್ಳಿ ಗ್ರಾಮದಲ್ಲಿ ಕಾಲ ಕಳೆದಂತೆ ಹಬ್ಬ ಬಿದ್ದ ದಿನವೇ ಆಚರಣೆ ಮಾಡಲು ಆರಂಭಿಸಿದರು. ಆದರೆ ಈ ಆರು ಗ್ರಾಮಗಳು ಮಾತ್ರ ದೀಪಾವಳಿ ಹಬ್ಬ ಯಾವ ದಿನ ಬಿದ್ದರೂ ಬುಧವಾರವೇ ಹಬ್ಬವನ್ನು ಆಚರಣೆ ಮಾಡುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿವೆ.

ಫ್ರೆಶ್ ನ್ಯೂಸ್

Latest Posts

Featured Videos