ಗ್ರಾಮ ಪಂಚಾಯ್ತಿ ಅಧಿಕಾರಿಗಳಿಂದಲೇ ಸಿಎ ಸೈಟ್ಗಳು ಮಾರಾಟ!?

ಗ್ರಾಮ ಪಂಚಾಯ್ತಿ ಅಧಿಕಾರಿಗಳಿಂದಲೇ ಸಿಎ ಸೈಟ್ಗಳು ಮಾರಾಟ!?

ಬೆಂಗಳೂರು, ಜು. 3: ಅದು ಬೆಂಗಳೂರು ಪಕ್ಕದಲ್ಲೆ ಬೃಹತ್ ಆಕಾರವಾಗಿ ಬೆಳೆಯುತ್ತಿರೋ ಮಗ್ಗದ ನಗರಿ. ಇನ್ನೂ ನಗರದ ಪಕ್ಕದಲ್ಲೆ ಕೈಗಾರಿಕಾ ಪ್ರದೇಶ ತಲೆ ಎತ್ತಿದ್ದು, ಇಲ್ಲಿನ ಸುತ್ತಮುತ್ತಲಿನ ಜಮೀನು ಬೆಲೆ ಗಗನಕ್ಕೇರಿದೆ. ಅದರಂತೆ ಲೇಔಟ್ಗಳು ಕೂಡ ಸಾಕಷ್ಟು ನಿರ್ಮಾಣವಾಗಿದ್ದು, ಸರ್ಕಾರಕ್ಕೆ ಬಡಾವಣೆಗಳಿಂದ ಉದ್ಯಾನವನ ಮೀಸಲು ಜಾಗವನ್ನ ನಿಯಮದಂತೆ ಬಿಡಲಾಗಿದೆ. ಆದ್ರೆ ಅಧಿಕಾರಿಗಳೇ ಸಿಎ ಸೈಟ್ಗಳನ್ನ ಅಕ್ರಮವಾಗಿ ಮಾರಾಟ ಮಾಡಿರೋ ಆರೋಪ ಕೇಳಿ ಬಂದಿದೆ,. ಸರ್ಕಾರಿ ಆಸ್ತಿ ಉಳಿಸಬೇಕಾದ ಅಧಿಕಾರಿಗಳೇ ಅಕ್ರಮವೆಸಗಿದ್ರಾ ಅನ್ನೋ ಅನುಮಾನ ಮೂಡಿದೆ.

ಲೇಔಟ್ಗಳಲ್ಲಿ ಸರ್ಕಾರಕ್ಕೆ ಬಿಟ್ಟಿರುವ ಸಿಎಂ ಸೈಟ್ಗಳಲ್ಲಿ ನಿರ್ಮಾಣವಾಗಿರೋ ತಂತಿಬೇಲಿ. ಉದ್ಯಾನವನ ಮೀಸಲು ಜಾಗವನ್ನ ಅಕ್ರಮವಾಗಿ ಸೈಟ್ಗಳು ಮಾರಾಟ ಮಾಡಿದ್ದಾರೆ ಅಂತಾ ಆರೋಪ ಮಾಡ್ತಿರೋ ಸ್ಥಳೀಯ ಹೋರಾಟಗಾರರು. ಯಾವುದೇ ಅಕ್ರಮವಾಗಿಲ್ಲ ಅಂತಾ ಸಮಾಜಾಯಿಷಿ ನೀಡ್ತಿರೋ ಪಿಡಿಓ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಾ ಶೆಟ್ಟಿಹಳ್ಳಿ ಬಳಿಯ ರಾಜ್ಕೋಟ್ ಬಡಾವಣೆಯಲ್ಲಿ. ಅಂದಹಾಗೆ ಇಲ್ಲಿನ ಕೈಗಾರಿಕಾ ಪ್ರದೇಶದ ಪಕ್ಕದಲ್ಲಿ ರಾಜ್ಕೋಟ್ ಡೆವಲಪರ್ಸ್ ನಿಂದ ಲೇಔಟ್ ನಿರ್ಮಾಣ ಮಾಡಲಾಗಿದೆ. ಇನ್ನೂ ಒಂದು ಬಡಾವಣೆ ನಿರ್ಮಾಣ ಮಾಡಬೇಕಾದ್ರೆ ನಿಯಮದಂತೆ ಸಿಎ ಸೈಟ್ ಪಾರ್ಕ್ ಜಾಗವನ್ನ ಬಿಡಬೆಕಾಗುತ್ತದೆ. ಅದರಂತೆ ಲೇಔಟ್ನಲ್ಲಿ ಪ್ಲಾನಿಂಗ್ ಅನುಮತಿ ಪಡೆದು 6 ಗುಂಟೆ ಮೂರು ಸೈಟ್ಗಳ ಜಾಗದಷ್ಟು ಉದ್ಯಾನವನ ಮೀಸಲು ಜಾಗವನ್ನ ಬಿಡಲಾಗಿತ್ತು. ಆದ್ರೆ ಇದೀಗ ಅದೇ ಪಾರ್ಕ್ ಮೀಸಲು ಜಾಗವನ್ನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಕುಮಾರ್ ಎಂಬುವವರು ಸಾರ್ವಜನೀಕರಿಗೆ ಉಳಿಸಿಕೊಳ್ಳೋದು ಬಿಟ್ಟು ಸೈಟ್ಗಳ ಮಾರಾಟ ಮಾಡಿಸಿಕೊಂಡು ಅದಕ್ಕೆ ಇ ಖಾತೆಯನ್ನ ಮಾಡಲು ಮುಂದಾಗಿದ್ದಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಜತೆಗೆ ಪಾರ್ಕ್ ಮೀಸಲು ಜಾಗವನ್ನ ಅಕ್ರಮವಾಗಿ ಕೌಂಪೌಂಡ್ ನಿರ್ಮಾಣ ಮಾಡಲಾಗಿದ್ದು ಸಾರ್ವಜನೀಕರಿಗೆ ಉಳಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಸ್ಥಳೀಯ ಹೋರಾಟಗಾರರು: ಶ್ರೀನಿವಾಸ್, ನರಸಿಂಹಮೂರ್ತಿ

ಅಂದಹಾಗೆ ಒಂದು ಲೇಔಟ್ ನಿರ್ಮಾಣವಾದಗ ಸರ್ಕಾರಿ ಮೀಸಲು ಪಾರ್ಕ್ ಜಾಗವನ್ನ ಬಿಡಲಾಗುತ್ತದೆ. ಹೀಗೆ ಬಿಟ್ಟ ಜಾಗವನ್ನ ಸಂಬಂಧಪಟ್ಟ ಸ್ಥಳೀಯ ಗ್ರಾಮ ಪಂಚಾಯ್ತಿ ತಮ್ಮ ವಶಕ್ಕೆ ಪಡೆದು ಉದ್ಯಾನವನವನ್ನಾಗಿ ಅಭಿವೃದ್ದಿ ಮಾಡಬೇಕಂತೆ. ಆದ್ರೆ ಲೇಔಟ್ ಪ್ಲಾನಿಂಗ್ ನೋಡದೇ ಸಿಎ ಸೈಟ್ಗಳನ್ನ ಅಕ್ರಮವಾಗಿ ಮಾರಾಟ ಮಾಡಿ ಖಾತೆಗಳನ್ನ ಪಿಡಿಓ ಮಾಡ್ತಿದ್ದಾರೆ ಅಂತಾ ಸ್ಥಳೀಯರು ದೂರಿದ್ದಾರೆ. ಜತೆಗೆ ಇದೀಗ ಕೌಂಪೌಡ್ ಹಾಕಿರೋ ಸಿಎ ಸೈಟ್ಗಳ ಬೆಲೆ ಕೋಟ್ಯಾಂತರ ಬೆಲೆ ಬಾಳಲಿದ್ದು ಸಾರ್ವಜನೀಕರು ಸಂಭಂಧಪಟ್ಟ ಅಧಿಕಾರಿಗಳು ಜಾಗ ಉಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಹಿಂದೆ ಗ್ರಾಮ ಪಂಚಾಯ್ತಿಯಿಂದಲೇ ಇದು ಸಿಎ ಜಾಗ ಅಂತಾ ಬೋರ್ಡ್ ಕೂಡ ಹಾಕಿ ಹಿಂದಕ್ಕೆ ಪಡೆಯಲಾಗಿದ್ದು, ಸ್ಥಳೀಯರು ಅಕ್ರಮವಾಗಿ ಸೈಟ್ ಮಾರಾಟ ಮಾಡಿರೋದು ಸ್ಪಷ್ಟ ಅಂತೀದ್ದಾರೆ. ಇನ್ನೂ ಈ ಬಗ್ಗೆ ಪಿಡಿಓ ಕುಮಾರ್ರನ್ನ ಕೇಳಿದ್ರೆ ಸಂಬಂಧಪಟ್ಟ ಲೇಔಟ್ ಮಾಲೀಕರು ಸಿಎ ಸೈಟನ್ನ ಗ್ರಾಮ ಪಂಚಾಯ್ತಿಗೆ ಹಸ್ತಾಂತರ ಮಾಡಿಲ್ಲ. ಜತೆಗೆ ಈ ಹಿಂದೆ ಪ್ಲಾನಿಂಗ್ ಅನುಮತಿಯನ್ನ ಗ್ರಾಮ ಪಂಚಾಯ್ತಿಯಿಂದ ಕೊಡೋದಿಕ್ಕೆ ಬರೋದಿಲ್ಲ. ಯಾರು ಕೊಟ್ಟಿದ್ದಾರೋ ಅದು ಅಕ್ರಮ ಅಂತೀದ್ದಾರೆ. ಹೀಗಾಗಿ ಲೇಔಟ್ ಪಾರ್ಕ್ ಮೀಸಲು ಜಾಗ ಎಲ್ಲಿ ಹೋಯ್ತು ಅನ್ನೋ ಅನುಮಾನ ಎಲ್ಲರಲ್ಲೂ ಮೂಡಿದೆ. ಒಟ್ಟಾರೇ ಆರಂಭದಲ್ಲಿ ಲೇಔಟ್ ನಿರ್ಮಾಣ ಮಾಡುವ ಮಾಲೀಕರು ಸಿಎ ಸೈಟ್ಗಳನ್ನ ಕೇವಲ ಪ್ಲಾನಿಂಗ್ನಲ್ಲಿ ತೋರಿಸಿ ನಂತರ ಅಕ್ರಮವಾಗಿ ಮಾರಾಟ ಮಾಡ್ತಿದ್ದಾರಾ ಅನ್ನೋ ಅನುಮಾನ ಮೂಡಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಕೂಡಲೇ ಪರಿಶೀಲಿಸಿ ಸಿಎ ಸೈಟ್ಗಳು ಪಂಚಾಯ್ತಿಗಳಲ್ಲಿ ಖಾತೆಗಳಾಗುತ್ತಿವೆಯೋ ಅನ್ನೋದನ್ನ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕಿದೆ.

 

 

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos