ಸರಕಾರಿ ಉದ್ಯೋಗಗಳಿಗೆ ಸಾಮಾಜಿಕ ತಾಣಗಳ ಬಳಕೆ ನಿಷೇಧ

ಸರಕಾರಿ ಉದ್ಯೋಗಗಳಿಗೆ ಸಾಮಾಜಿಕ ತಾಣಗಳ ಬಳಕೆ ನಿಷೇಧ

ನವದೆಹಲಿ, ಜು. 13: ಮಾಹಿತಿ ಸೋರಿಕೆ ಹಾಗೂ ಹ್ಯಾಕಿಂಗ್ ಮುಂತಾದ ಸೈಬರ್ ಅಪರಾಧಗಳಿಂದ ಸುರಕ್ಷಿತವಾಗಿರಲು, ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾ ಬಳಸುತ್ತಿರುವ ಸರಕಾರಿ ಉದ್ಯೋಗಿಗಳಿಗೆ ಕೇಂದ್ರ ಗೃಹ ಸಚಿವಾಲಯವು ನಿಷೇಧಾಜ್ಞೆ ಹೇರಿದೆ.
ರಹಸ್ಯವಾದ ಮತ್ತು ಸೂಕ್ಷ್ಮ ಮಾಹಿತಿಗಳ ಸೋರಿಕೆ ತಡೆಗೆ ಕೇಂದ್ರ ಸರಕಾರ ಮುಂದಾಗಿದ್ದು, ಸರಕಾರಿ ಉದ್ಯೋಗಿಗಳಿಗೆ ಇಂಟರ್ನೆಟ್ ಬಳಕೆ ವೇಳೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ. ಅದರ ಪ್ರಕಾರ, ಫೇಸ್ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆ, ಯುಎಸ್ಬಿ ಡ್ರೈವ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.
ರಾಷ್ಟ್ರೀಯ ಮಾಹಿತಿ ಸುರಕ್ಷತಾ ನೀತಿ ಮತ್ತು ಮಾರ್ಗಸೂಚಿಗಳ ಮೂಲಕ ಅನುಷ್ಠಾನಕ್ಕೆ ತರಲಾಗಿರುವ ಹೊಸ ನಿಯಮಾವಳಿಯು, ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯ ಸೋರಿಕೆ ತಡೆಗಟ್ಟುವ ಉದ್ದೇಶ ಹೊಂದಿದೆ.
ಸರಕಾರಿ ಉದ್ಯೋಗಿಗಳು ತಮ್ಮ ಕಚೇರಿ ಕಂಪ್ಯೂಟರ್ ಹಾಗೂ ಫೋನ್ಗಳಲ್ಲಿ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಮುಂತಾದ ವಿಭಿನ್ನ ಸಾಮಾಜಿಕ ಜಾಲ ತಾಣಗಳನ್ನು ಬಳಸುವಂತಿಲ್ಲ.

ಸರಕಾರಿ ಉದ್ಯೋಗಿಗಳು ಏನು ಮಾಡಬಾರದು?
ಸೂಕ್ತ ದಾಖಲೆಗಳಿಲ್ಲದೆ ಯುಎಸ್ಬಿ ಸಾಧನವನ್ನು ಯಾವುದೇ ಸರಕಾರಿ ಉದ್ಯೋಗಿಯೂ ಒಯ್ಯುವಂತಿಲ್ಲ.
ಕಚೇರಿಯ ಫೋನ್ ಮತ್ತು ಕಂಪ್ಯೂಟರುಗಳಲ್ಲಿ ಫೇಸ್ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ತಾಣಗಳ ಬಳಕೆ ನಿಷೇಧಿಸಲಾಗಿದೆ.
ಗೂಗಲ್ ಡ್ರೈವ್, ಡ್ರಾಪ್ಬಾಕ್ಸ್, ಐಕ್ಲೌಡ್ ಮತ್ತಿತರ ಕ್ಲೌಡ್ ಸೇವೆಗಳ ಬಳಕೆಗೆ ನಿಷೇಧ.
ವರ್ಗೀಕೃತ ಮಾಹಿತಿಯನ್ನು ಯಾವತ್ತೂ ಇ-ಮೇಲ್ ಮೂಲಕ ಕಳುಹಿಸುವಂತಿಲ್ಲ.
ಪಬ್ಲಿಕ್ ವೈಫೈ ಸಂಪರ್ಕಗಳನ್ನು ಬಳಸಿ ಯಾವತ್ತೂ ಕೂಡ ಅಧಿಕೃತ ಇಮೇಲ್ ಖಾತೆಯನ್ನು ಉಪಯೋಗಿಸುವಂತಿಲ್ಲ.
ಸಂಸ್ಥೆಯೇ ಒದಗಿಸಿರುವ ಸ್ಟೋರೇಜ್ ಸಾಧನಗಳಲ್ಲಿ ಮಾತ್ರವೇ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿಡಬಹುದು.
ಕಚೇರಿ ಕೆಲಸಕ್ಕೆ ಸ್ವಂತ ವೈಫೈ ಬಳಸುವಾಗಲೂ ಕೆಲವೊಂದು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos