ಕೊರೊನಾ ವಿರುದ್ಧ ಯುದ್ಧಕ್ಕೆ ಇಳಿದ ಸರ್ಕಾರ…?

ಕೊರೊನಾ ವಿರುದ್ಧ ಯುದ್ಧಕ್ಕೆ ಇಳಿದ ಸರ್ಕಾರ…?

ಬೆಂಗಳೂರು :ಏ,6: ರಾಜ್ಯ ಸರ್ಕಾರದ ಕೇಂದ್ರ ಸರ್ಕಾರಕ್ಕೆ ಕೊಟ್ಟಿರುವ ಮಾಹಿತಿಯಂತೆ ರಾಜ್ಯಸರ್ಕಾರವು ಶಸ್ತ್ರಾಸ್ತ್ರಗಳಿಲ್ಲದೆ ಕೊರೊನಾ ವೈರಸ್ ವಿರುದ್ಧದ ಯುದ್ಧಕ್ಕೆ ಇಳಿದಿದೆಯಾ? ಎಂಬ ಸಂಶಯ ಬರುತ್ತಿದೆ.

ಕರೋನಾ ದಿನೇ ದಿನೇ ಬಾಧಿಸುತ್ತಿದ್ದು, ಪಾಸಿಟೀವ್ ಕೇಸ್ ಗಳು ಹೆಚ್ಚಾಗುತ್ತಲೇ ಇವೆ. ಸೋಂಕಿತರ ಸಂಖ್ಯೆ 151ಕ್ಕೆ ಏರಿದ್ದು, ಅದರಲ್ಲಿ ಮೂವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.‌ ಈಗಾಗಲೇ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂದವರ ಸಂಖ್ಯೆ ಹೆಚ್ಚಿದ್ದು, ದಿನಕಳೆದಂತೆ ಪಾಸಿಟಿವ್ ಕೇಸ್ ದಾಖಲಾಗುತ್ತಿದೆ.‌ಪರಿಸ್ಥಿತಿ ಹೀಗಿರುವಾಗ, ಮುಂದಿನ ದಿನಗಳಲ್ಲಿ ವೆಂಟಿಲೇಟರ್ ಸಮಸ್ಯೆ ಉದ್ಭವಿಸಬಹುದು

ಅಂದಹಾಗೇ, ಮುಂದೊಂದು ದಿನ ಕೋರೊನಾದಿಂದ ವೆಂಟಿಲೇಟರ್ ಬೇಕಾದಲ್ಲಿ ಅದರ ಶಾರ್ಟೆಜ್ ಆಗದೇ ಇರೋಲ್ಲ.ಯಾಕೆ ಅಂತೀರಾ, ನಮ್ಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರೋ ವೆಂಟಿಲೇಟರ್​ಗಳ ಸಂಖ್ಯೆ ಕೇಳಿದ್ರೆ ನೀವು ನಿಜಕ್ಕೂ ಶಾಕ್ ಆಗುತ್ತಿರಾ.  ಕೊರೊನಾ ವೈರಸ್ ಪೀಡಿತರಿಗೆ ಅಂತಿಮ ಹಂತದಲ್ಲಿ ಚಕಿತ್ಸೆ ಕೊಡಲು ಲಭ್ಯವಿರುವ ವೆಂಟಿಲೇಟರ್‌ಗಳ ಸಂಖ್ಯೆ ಕೇವಲ 178 ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಹಿತಿ ಕೊಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos