ಸರ್ಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಪ್ರಯಾನಿಸುವುದು ದುಸ್ತರ

ಸರ್ಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಪ್ರಯಾನಿಸುವುದು ದುಸ್ತರ

ಜಡಿಗೇನಹಳ್ಳಿ, ಆ. 14: ಹೊಸಕೋಟೆ ತಾಲ್ಲೂಕು ಅಥವಾ ಮಾಲೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ದಿನ ನಿತ್ಯ ನೂರಾರು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದು, ಕೆಲವೊಂದು ಸರ್ಕಾರಿ ಬಸ್ ಗಳಲ್ಲಿ ಒಳಗಡೆ ಖಾಲಿ ಇದ್ದರು ಸಹ ಹೊರಗಡೆ ನೇತಾಡಿಕೊಂಡು ಪ್ರಯಾಣಿಸುವ ವಿದ್ಯಾರ್ಥಿಗಳನ್ನು ಜಡಿಗೇನಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಸ್ಥಳಿಯ ಸಾರ್ವಜನಿಕ ವಿಜಯಕುಮಾರ್ ಎಂಬುವರು ಕಂಡೆಕ್ಟರ್ ರವರನ್ನು ಏನು ಸ್ವಾಮಿ ಒಳಗಡೆ ಅಷ್ಟು ಜಾಗವಿದೆ ತಾವು ಒಳಗಡೆ ಇದ್ದು, ಎಲ್ಲರನ್ನು ಒಳಗೆ ಕಳುಹಿಸಬಹುದಲ್ಲವಾ ಎಂದು ಕೇಳಿದ್ದಕ್ಕೆ ಅದು ನಮ್ಮ ಕೆಲಸವಲ್ಲ ಬೇಕಾದವರು ಬರುತ್ತಾರೆ ನಾನೇನು ಮಾಡಲು ಆಗುವುದಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಒಂದು ವೇಳೆ ಯಾರಿಗಾದರು ತೊಂದರೆ ಯಾದರೆ ಯಾರು ಇದಕ್ಕೆ ಜವಾಬ್ದಾರರು. ಇದನ್ನು ಸಾರಿಗೆ ಸಂಸ್ಥೆಯವರು ಗಂಬೀರವಾಗಿ ಪರಿಗಣಿಸಿದರೆ ಅಗುವ ಅನಾಹುತವನ್ನು ತಪ್ಪಿಸಬಹುದು. ಬುದ್ದಿ ಹೇಳಲು ಹೋದ ಸಾರ್ವಜನಿಕರಲ್ಲಿ ಅನುಮಚಿತವಾಗಿ ವರ್ತನೆ ಮಾಡಿದ ಮಾಲೂರು ಮತ್ತು ಬೆಂಗಳೂರು ಕಡೆ ಹೋಗುವ ಬಸ್ಸಿನ ನಿರ್ವಾಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜ ಸೇವಕ ವಿಜಯಕುಮಾರ್ ಒತ್ತಾಯಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos