ಸರ್ಕಾರಿ  ಆಸ್ಪತ್ರಗಳಲ್ಲಿ ಪ್ಲೇಟ್ ಲೆಟ್ ದಾಸ್ತಾನು ಕೊರತೆ!

ಸರ್ಕಾರಿ  ಆಸ್ಪತ್ರಗಳಲ್ಲಿ ಪ್ಲೇಟ್ ಲೆಟ್ ದಾಸ್ತಾನು ಕೊರತೆ!

ಬೆಂಗಳೂರು, ಆ. 15: ಸರ್ಕಾರಿ  ಆಸ್ಪತ್ರಗಳಲ್ಲಿ ಪ್ಲೇಟ್ ಲೆಟ್ ದಾಸ್ತಾನು ಕೊರತೆಯಿಂದ ಬಡರೋಗಿಗಳಿಗೆ ತೀರ್ವ ತೊಂದರೆ ಎದುರಾಗಿದೆ. ಡೆಂಘೀ ಪ್ರಕರಣಗಳು ಮತ್ತಷ್ಟು ಉಲ್ಬಣಗೊಂಡು ರೋಗಿಗಳ ಸಂಖ್ಯ ದಿನೇ ದಿನೇ ಹೆಚ್ಚುತ್ತಿದ್ದಾರೆ.

ಜೀವರಕ್ಷಕ ಪ್ಲೇಟ್ಲೆಲೆಟ್ ಸರ್ಕಾರಿ ಆಸ್ಪತ್ರೆಗಳಲ್ಲಿ, ನೋ ಸ್ಟಾಕ್, ನಾಮಾಕಾವಸ್ತೆಗೆ ಮಾತ್ರ ಉಚಿತ ಎಂದು ನಾಮಫಲಕ ಹಾಕಲಾಗಿದೆ. ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಸಿಗಬೇಕು ಆದರೆ ಯಾವ ಆಸ್ಪತ್ರೆಗಳಲ್ಲಿ ನೋಡಿದರು ನೋ ಸ್ಟಾಕ್ ನಾಮ ಫಲಕ ನೋಡಿ ರೋಗಿಗಳು ಕಂಗಾಲಾಗಿದ್ದಾರೆ.

ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಪ್ಲೇಟ್ಲೆಲೆಟ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ನಿಯಮದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತನಿಧಿ ಕೇಂದ್ರಗಳು ಬಡ ರೋಗಿಗಳಿಗೆ ಉಚಿತವಾಗಿ ಪ್ಲೇಟ್ಲೆಲೆಟ್ ನೀಡಬೇಕು. ಆದರೆ, ದಾಸ್ತಾನು ಕೊರತೆ ಕಾಡುತ್ತಿದೆ. ಸಾಲು ಸಾಲು ರಜೆಗಳಿಂದಾಗಿ ರಕ್ತ ದಾನಿಗಳು ಬ್ಲಡ್ ಬ್ಯಾಂಕ್ ಕೇಂದ್ರಗಳು ರಜೆ ಮಾಡಿದ್ದು, ರಕ್ತದಾನ ಶಿಬಿರಗಳ ಕೊರತೆ, ಇಷ್ಟೆಲ್ಲ ಬೇಡಿಕೆಗೆ ಕಾರಣವಾಗಿದೆ.

ಪ್ಲೇಟ್ಲೆಲೆಟ್ ಗಳ ಜೀವಿತಾವಧಿ ಕೇವಲ ಐದು ದಿನ ಮಾತ್ರ. ನಗರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅನೈರ್ಮಲ್ಯ ಹೆಚ್ಚುತ್ತಿದ್ದ, ಸೊಳ್ಳೆ ಸಂತತಿ ಹೆಚ್ಚಿನ ಪ್ರಮಾಣವೇ ರೋಗಿಗಳ ಸಂಖೆಯಲ್ಲೂ ದ್ವಿಗುಣ ಗೊಂಡು, ಬೇಡಿಕೆ ಜಾಸ್ತಿ ಆಗಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ಸೇವಾ ಸಂಸ್ಥೆಗಳಲ್ಲಿ ಪ್ಲೇಟ್ಲೆಲೆಟ್ ದಾಸ್ತಾನು ಇದೆ ಆದರೂ ಅವರು ಉಚಿತವಾಗಿ ನೀಡದ ಕಾರಣ ಬಡ ರೋಗಿಗಳ ಕೈಗೆಟಕುತ್ತಿಲ್ಲ. ಉಚಿತವಾಗಿ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಸಂಬಂದಿಗಳು ಅನಿವಾರ್ಯವಾಗಿ ರಕ್ತ ನಿಧಿ ಕೇಂದ್ರಗಳಿಗೆ ಅಲೆಯುವಂತ ಪರಿಸ್ಥಿತಿ ನಿರ್ಮಾಣ ಆಗಿದ್ದು, ಒಂದು ಯೂನಿಟ್ ಗೆ 700 ರಿಂದ  1000 ರೂ ನೀಡಿ ಕೊಂಡು ತರಲೇಬೇಕಿದೆ.

ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ ಕಳೆದ ಒಂದು ವಾರದಿಂದ ನಗರದ ಪ್ರಮುಖ ಆಸ್ಪತ್ರೆಗಳಾದ ಲೇಡಿಕರ್ಜನ್, ಬೌರಿಂಗ್, ವಿಕ್ಟೋರಿಯಾ, ವಾಣಿ ವಿಲಾಸ, ಕೆ.ಸಿ ಜನರಲ್, ಸಂಜಯ್ ಗಾಂಧಿ ಸಂಶೋಧನಾ ಕೇಂದ್ರ, ಇಂಧಿರಾಗಾಂಧಿ ಮಕ್ಕಳ ಆಸ್ಪತ್ರೆ, ನಿಮ್ಹಾನ್ಸ್, ಕಿದ್ವಾಯಿ ಹಾಗೂ ಕಮಾಂಡೋ ಆಸ್ಪತ್ರೆಗಳ ರಕ್ತ ನಿಧಿ ಕೇಂದ್ರಗಳಲ್ಲಿ ಪ್ಲೇಟ್ಲೆಲೆಟ್ ಕೊರತೆ ಎದುರಿಸುತ್ತಿವೆ. ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಮಾತ್ರ ಹತ್ತು ಯೂನಿಟ್ ದಾಸ್ತಾನು ಇದೆ.

ಶಿವಾಜಿನಗರದ ಬೌರಿಂಗ್ ಹಾಗೂ ಲೇಡಿ ಕರ್ಜ಼ನ್ ಆಸ್ಪತ್ರಗಳಲ್ಲಿ ಸಾಕಷ್ಟು ಜನರು ಡೆಂಘೀ ಪೀಡಿತ ರೋಗಿಗಳು ದಾಖಲಾಗಿದ್ದು, ನಾಲ್ಕೈದು ದಿನಗಳಿಂದ ಪ್ಲೇಟ್ಲೆಲೆಟ್  ದಾಸ್ತಾನಿಲ್ಲದೆ ರೋಗಿಗಳ ಸಂಭಂದಿಗಳು ಖಾಸಗಿ ಆಸ್ಪತ್ರೆಗಳಿಗೆ ಅಲೆಯತ್ತಿದ್ದಾರೆ.

ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಯಲ್ಲಿ ಕೊಂಚ ಮಟ್ಟಿಗೆ ದಾಸ್ತಾನಿದೆ, ಆದರೂ ಆ,15 ಕ್ಕೆ ಜೀವಿತಾವದಿ ಮುಗಿಯತ್ತದೆ. ಮತ್ತಷ್ಟು ಕೊರತೆ ಎದುರಾಗಲಿದೆ. ಖಾಸಗಿ ಎನ್ ಜಿಒ ರಕ್ತನಿಧಿ ಕೇಂದ್ರಗಳಿಗೆ ಪ್ಲೇಟ್ಲೆಲೆಟ್ ಇದೆ ಆದರೂ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ಕೊಡಬೇಕಿದೆ.

ಚಾಮರಾಜ ಪೇಟೆಯ ರಾಷ್ರೋತ್ತಾನ ರಕ್ತನಿಧಿ ಕೇಂದ್ರ, ಇಂದಿರಾನಗರದ ರೋಟರಿ ಟಿಟಿಕೆ ರಕ್ತನಿಧಿ ಕೇಂದ್ರ, ನಾರಾಯಣ ಹೃದಯಾಲಯ ಪ್ರಮುಖ ರಕ್ತ ನಿಧಿ ಕೇಂದ್ರಗಳಲ್ಲಿ ನೂರು ಯೂನಿಟ್ ಗೂ ಹೆಚ್ಚು ರಕ್ತ ಸಂಗ್ರಹ ಇದೆಯಾದರೂ ಸಾಮನ್ಯ ದಿನಗಳಿಗಿಂತ ಹತ್ತು ಪಟ್ಟು ಬೇಡಿಕೆ ಹೆಚ್ಚಿದ ಕಾರಣ ಕೊರತೆ ಉಂಟಾಗಿದೆ.

ಖಾಸಗಿ ರಕ್ತ ನಿಧಿ ಕೇಂದ್ರಗಳೊಂದಿಗೆ ಮಾತುಕತೆ ನಡೆಸಿ ನಿರ್ಧಿಷ್ಟ ದರ ನಿಗದಿ ಮಾಡಿ, ದಾಸ್ತಾನು ಸಮನ್ವಯತೆ ಕಾಪಾಡಿಕೊಂಡು ರೋಗಿಗಳಿಗೆ ಅಗತ್ಯ ಪ್ಲೇಟ್ಲೆಲೆಟ್ ಸಕಾಲದಲ್ಲಿ ಸಿಗುವಂತಹ ವ್ಯವಸ್ಥೆ ಕಲ್ಪಿಸ ಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಬಂದು ಪ್ಲೇಟ್ಲೆಲೆಟ್ ಲಭ್ಯ ಇದೆಯಾ ಎಂದು ಕೇಳುತ್ತಿರುವವರ ಸಂಖ್ಯೆ ಜಾಸ್ತಿ ಆಗಿದೆ. ಸ್ವಯಂ ಪ್ರೇರಣೆಯಿಂದ ರಕ್ತ ದಾನ ಮಾಡುವವರು ಸಿಗುತ್ತಿಲ್ಲ, ಜೊತೆಗೆ ಒತ್ತಾಯ ಮಾಡುವಂತಿಲ್ಲ, ಪ್ಲೇಟ್ಲೆಲೆಟ್ ಗಳ ಜೀವಿತಾವದಿ ಕಡಿಮೆ ಇರೋ ಕಾರಣ ಕೊರತೆ ಎದುರಾಗಿದೆ ಎಂದು ಕೆ.ಸಿ ಜನರಲ್ ಆಸ್ಪತ್ರೆ ಮೆಲ್ವಿಚಾರಕ ಭಾನುಮೂರ್ತಿ ತಿಳಿಸಿದ್ದಾರೆ.

ನಿಗದಿತವಾಗಿ ರಕ್ತದಾನ ಶಿಬಿರ ನಡೆಸುತ್ತೇವೆ. ಇತ್ತೀಚೆಗೆ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಸಂಗ್ರಹಣೆ ಮಾಡಿದ ರಕ್ತವನ್ನು ವಿಭಾಗಿಸಿ ಪ್ಲೇಟ್ಲೆಲೆಟ್ ಹೆಚ್ಚು ದಾಸ್ತಾನು ಮಾಡಿಕೊಳ್ಳುತ್ತೇವೆ. ಕಳೆದ ತಿಂಗಳಿಂದ 2000 ಯೂನಿಟ್ ಪ್ಲೇಟ್ಲೆಲೆಟ್ ಖರ್ಚಾಗಿದೆ. ಪ್ರತಿದಿನ 80 ಯೂನಿಟ್ ಬೇಡಿಕೆ ಇದ್ದು, ನಮ್ಮಲ್ಲೂ ಕೊರತೆ ಎದುರಾಗದೆ ಬೆಂಗಳೂರು ಟಿಟಿಕೆ ರಕ್ತನಿಧಿ ಕೇಂದ್ರದ ಡಾ.ಅಂಕಿತ್ ತಿಳಿಸಿದ್ದಾರೆ.

ವೈದ್ಯರು ನಮ್ಮಲ್ಲಿ ಪ್ಲೇಟ್ಲೆಲೆಟ್ ಇಲ್ಲ ಹೊರಗಡೆಯಿಂದ ತನ್ನಿ ಎಂದು ಹೇಳುತ್ತಾರೆ. ಖಾಸಗಿ ರಕ್ತ ನಿಧಿ ಕೇಂದ್ರಗಳಲ್ಲಿ 700 ಪಡೆಯುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ ಇದ್ದರೂ ದಾಸ್ತಾನಿಲ್ಲ ಎಂದು ಹೇಳುತ್ತಾರೆ. ನಮ್ಮಂತಹ ಬಡವರಿಗೆ ತುಂಬಾ ಅನಾನುಕೂಲ ಆಗಿದೆ.  ರೋಗಿಯ ಸಂಬಂದಿ ಅನಿಲ್ ಕುಮಾರ್ ಅವರು ಬೇಸರದಿಂದ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos