ಸರ್ಕಾರದಿಂದ ಬಡವರಿಗೆ ಬಂಪರ್

ಸರ್ಕಾರದಿಂದ ಬಡವರಿಗೆ ಬಂಪರ್

ಬೆಂಗಳೂರು, ಜ. 7 : ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ವಿವಿಧ ವಸತಿ ಯೋಜನೆಗಳಡಿ 1.20 ಲಕ್ಷ ರೂ.ಸಹಾಯಧನವನ್ನು 4 ಕಂತುಗಳಲ್ಲಿ ಪಾವತಿಸುತ್ತಿದ್ದು, ಎರಡು ಕಂತುಗಳಲ್ಲಿ ಸಹಾಯಧನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ವಿ. ಸೋಮಣ್ಣ ಈ ಕುರಿತು ಮಾಹಿತಿ ನೀಡಿದ್ದು, ವಸತಿ ಯೋಜನೆಗಳಿಗೆ 1.20 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಇದನ್ನು ಎರಡು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದ್ದು ಹಣ ದುರುಪಯೋಗಕ್ಕೆ ಕಡಿವಾಣ ಹಾಕಲಾಗುತ್ತಿದೆ. ಫಲಾನುಭವಿಗಳ ಸಂಖ್ಯೆ ತಗ್ಗಿಸಿ ಸಬ್ಸಿಡಿ ಮೊತ್ತವನ್ನು 1.20 ಲಕ್ಷ ರೂಪಾಯಿಯಿಂದ ಎರಡು ಲಕ್ಷ ರೂಪಾಯಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ 70 ಸಾವಿರ ರೂ. ನೀಡುತ್ತಿದ್ದು, 50 ಸಾವಿರ ರೂ.ರಾಜ್ಯ ಸರ್ಕಾರ ಭರಿಸುತ್ತದೆ. ಎಲ್ಲಾ ವಸತಿ ಯೋಜನೆ ಫಲಾನುಭವಿಗಳ ಸಹಾಯಧನ ಏರಿಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos