ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ5 ವರ್ಷ

ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ5 ವರ್ಷ

ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಿರ್ದೇಶಕ ಹಾಗೂ ನಟರಾಗಿ ಸೈ ಎನಿಸಿಕೊಂಡ ರಿಷಬ್ ಶೆಟ್ಟಿಯವರು ಕನ್ನಡದ ಮೋಸ್ಟ್ ಸೆನ್ ಶೇಷನ್ ನಿರ್ದೇಶಕರೆಂದು ಕರೆಸಿಕೊಂಡಿದ್ದಾರೆ. ಇವರನ್ನು ಡಿವೈನ್ ಸ್ಟಾರ್ ಎಂದು ಅಭಿಮಾನಿಗಳು ಕರೆಯುತ್ತಾರೆ. ಇವರಿಗೆ ಬೇರೆ ಭಾಷೆಗಳಿಂದ ಅವಕಾಶ ಬಂದರು ಸಹ ಅದನ್ನು ತಿರಸ್ಕರಿಸಿದ್ದಾರೆ, ಹಾಗೂ ಇವರಿಗೆ ಇರುವ ಕನ್ನಡದ ಮೇಲೆ ಅಭಿಮಾನವನ್ನು ಎತ್ತಿ ತೊರಿಸುತ್ತದೆ.
‘ಕಾಂತಾರ’ ಚಿತ್ರದಿಂದ ಅವರ ಖ್ಯಾತಿ ವಿಶ್ವಮಟ್ಟಕ್ಕೆ ಹಬ್ಬಿದೆ. ನಮ್ಮ ಕನ್ನಡ ಚಿತ್ರರಂಗವನ್ನು ಒಂದು ಉನ್ನತ ಸ್ಥಾನಕ್ಕೆ ಕರೆಯ್ದೊದಿದೆ. ಅವರ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ರಿಷಬ್ ಶೆಟ್ಟಿ ಅವರು ನಡೆದುಬಂದ ಹಾದಿಯನ್ನು ಮರೆತಿಲ್ಲ. ಇಂದು ಅವರಿಗೆ ವಿಶೇಷ ದಿನ. ರಿಷಬ್ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದ ‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರ ತೆರೆಗೆ ಬಂದು ಐದು ವರ್ಷಗಳು ಕಳೆದಿವೆ. ಆ ಬಗ್ಗೆ ರಿಷಬ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕಿರಿಕ್ ಪಾರ್ಟಿ’ ಸಿನಿಮಾ ರಿಷಬ್ ಶೆಟ್ಟಿ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿತು. ಹೀಗಾಗಿ, ಕಿರಿಕ್ ಪಾರ್ಟಿ ಬಳಿಕ ಅವರು ‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರವನ್ನು ನಿರ್ದೇಶನ ಮಾಡಿದರು. 2018ರಲ್ಲಿ ಈ ಚಿತ್ರ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಕೂಡ ಈ ಚಿತ್ರಕ್ಕೆ ಸಿಕ್ಕಿದೆ.
ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಹಿನ್ನೆಲೆ ಈ ಸಮಸ್ಯೆಗಳನ್ನು ಇಟ್ಟುಕೊಂಡು ರಿಷಬ್ ಶೆಟ್ಟಿ ಅವರು ‘ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು’ ಚಿತ್ರವನ್ನು ತೆರೆಗೆ ತಂದರು. ಈ ಚಿತ್ರಕ್ಕೆ ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಿಷಬ್ ಅವರು ಮೇಕಿಂಗ್ ಹಾಗೂ ಸಿನಿಮಾದ ಕೆಲ ಪ್ರಮುಖ ದೃಶ್ಯಗಳನ್ನು ಜೋಡಿಸಿ ವಿಡಿಯೋ ಮಾಡಿದ್ದಾರೆ. ಅದನ್ನು ಪೋಸ್ಟ್ ಮಾಡಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos