ಸರ್ಕಾರಿ ಶಾಲೆಗಳ ಬಲವರ್ಧನೆಯಾಗಬೇಕು: ನರಸಿಂಹಮೂರ್ತಿ

ಸರ್ಕಾರಿ ಶಾಲೆಗಳ ಬಲವರ್ಧನೆಯಾಗಬೇಕು: ನರಸಿಂಹಮೂರ್ತಿ

ಸೂಲಿಬೆಲೆ, ಸೆ. 16: ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರ ಮುಂದಾಗಿದೆ ಆದರೆ ಮೂಲಭೂತ ಸವಲತ್ತುಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಕೊರುಗು ಕಾಡುತ್ತಿದೆ. ಪ್ರಥಮವಾಗಿ ಇದನ್ನು ನಿವಾರಣೆಯಾಗಬೇಕು ಸರ್ಕಾರಿ ಶಾಲೆಗಳು ಬಲವರ್ಧನೆಯಾಗಬೇಕು ಎಂದು ಆಟೋ ಲೀವ್ ಇಂಡಿಯಾ ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕ ನರಸಿಂಹಮೂರ್ತಿ ಆಭಿಪ್ರಾಯಪಟ್ಟರು.

ಹೊಸಕೋಟೆ ತಾಲ್ಲೂಕಿನ ಬೇಗೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಟೋ ಲೀವ್ ಕಂಪನಿಯ ವತಿಯಿಂದ ನಿರ್ಮಾಣಗೊಂಡಿದ್ದ ಶೌಚಾಲಯನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ದೇಶ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಅಲ್ಲಿನ ಸ್ವಾಭಾವಿಕ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲಗಳು ಬಲಿಷ್ಟವಾಗಿರಬೇಕು, ಸಾಮಾಜಿಕ ಮೌಲ್ಯ, ಶೈಕ್ಷಣಿಕ ಮೌಲ್ಯ, ಸ್ವಚ್ಚತೆ ಮೌಲ್ಯಗಳು ವೃದ್ದಿಯಾಗಬೇಕಿದೆ ಎಂದರು.

ಪ್ರೌಢಶಾಲೆ ಮುಖ್ಯಶಿಕ್ಷಕ ಮಹೇಶ್ ಮಾತನಾಡಿ, ಸ್ವಚ್ಚ ಭಾರತ್ ಪರಿಕಲ್ಪನೆಯಲ್ಲಿ ದೇಶ ಸ್ವಚ್ಚತೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು, ಬೇಗೂರು ಪ್ರೌಢಶಾಲೆಯಲ್ಲಿ ಈ ಹಿಂದೆ ಇದ್ದ ಶೌಚಾಲಯ ಹಳೆಯದಾಗಿದ್ದು, ಆಟೋ ಲೀವ್ ಕಂಪನಿಯ ಸಹಕಾರದಲ್ಲಿ ಸುಮಾರು 7.50 ಲಕ್ಷ ವೆಚ್ಚದಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದ್ದು, ಕಂಪನಿಯ ಶಿಕ್ಷಣ ಕ್ಷೇತ್ರದ ಕಾಳಜಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಶೇ 63 ರಷ್ಟು ಕಾಯಿಲೆಗಳು ಕುಡಿಯುವ ನೀರಿನ ಮೂಲಗಳಿಂದಲೇ ಹರಡುತ್ತವೆ ಅದರಲ್ಲಿ ಸ್ವಚ್ಚತೆಯು ಇರುತ್ತದೆ, ಮಕ್ಕಳಿಗೆ ಸ್ವಚ್ಚತೆ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಇದೇ, ಮಾನಸಿಕವಾಗಿ ದೈಹಿಕವಾಗಿ ಬಲಿಷ್ಟವಾಗಿರಬೇಕಿದೆ ಎಂದು ಆಟೋಲೀವ್ ನಿರ್ದೆಶಕ ನರಸಿಂಹಮೂರ್ತಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಬೇಗೂರು ಕೆ.ಬಾಬು, ಬಿ.ಎಂ.ಗೋಪಾಲಪ್ಪ, ಆರ್ಥಿಕ ವಿಭಾಗ ಮುಖ್ಯಸ್ಥ ರಾಜೇಶ್ ರಾಮ್,ಅಮಿತ್ ಶ್ರೀವತ್ಸ, ಆಶೋಕ್, ಪ್ರೇಮನಾಥ್ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶ್ವತ್ಥ್, ಗ್ರಾ.ಪಂ.ಮಾಜಿ ಸದಸ್ಯ ಬೈರೇಗೌಡ, ಕಸಾಪ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಕೆ.ಎಂ.ಚೌಡೇಗೌಡ, ಶಾಲಾ ಶಿಕ್ಷಕರಾದ ರಾಜೇಶ್, ಸಿದ್ದಲಿಂಗಯ್ಯ, ನಾಗರಾಜ್, ಇತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos