ರೈತರನ್ನು ಒಕ್ಕಲೆಬ್ಬಿಸಲು ಮುಂದಾದ ಆಡಳಿತ

ರೈತರನ್ನು ಒಕ್ಕಲೆಬ್ಬಿಸಲು ಮುಂದಾದ ಆಡಳಿತ

ಆನೇಕಲ್:ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರ ಜಮೀನನ್ನು ರಾಜೀವಗಾಂಧಿ ವಸತಿ ನಿಗಮಕ್ಕೆ ಮಂಜೂರು ಮಾಡಿದ್ದು, ರೈತರನ್ನು ಒಕ್ಕಲೆಬ್ಬಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ಕೂತಗಾನಹಳ್ಳಿ ಹಾಗೂ ಇಟ್ಟಂಗೂರು ಗ್ರಾಮದ ಸಾಗುವಳಿದಾರರು ಕೂತಗಾನಹಳ್ಳಿ ಗ್ರಾಮದಲ್ಲಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನು ನಡೆಸಿದರು.
ಸರ್ಜಾಪುರ ಹೋಬಳಿ ಕೂತಗಾನಹಳ್ಳಿ ಸರ್ವೇ ನಂಬರ್ ೬೭ ರಲ್ಲಿ ೬೫ ಎಕರೆ ಜಮೀನಿದ್ದು, ಅದರಲ್ಲಿನ ೩೨ ಎಕರೆ ಜಮೀನನ್ನು ಸರ್ಕಾರ ಕೆಲವು ರೈತರಿಗೆ ಮಂಜೂರು ಮಾಡಿದೆ. ಉಳಿದ ಜಾಗಕ್ಕೆ ಕೂತಕಾನಹಳ್ಳಿ ಹಾಗೂ ಇಟ್ಟಂಗೂರು ಗ್ರಾಮಗಳ ರೈತರು೧೯೯೧, ೧೯೯೨ ಹಾಗೂ ೧೯೯೮ ರಲ್ಲಿ ಮಂಜೂರಾತಿಗಾಗಿ ೫೦-೫೩ ಹಾಕಿಕೊಂಡಿದ್ದಾರೆ. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಮಂಜೂರಾತಿಗಾಗಿ ಯಾವುದೇ ಅರ್ಜಿಯನ್ನು ಹಾಕಿಕೊಂಡಿಲ್ಲ ಎಂಬ ಎಂಡರ‍್ಸ್ಸ್ಮೆಂಟ್ ನೀಡುತ್ತಿದ್ದಾರೆ.
ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರು ರೈತರಿಗೆ ಯಾವುದೇ ಮುಂಜಾಗ್ರತೆ ನೀಡದೆ ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಕಂದಾಯ ಇಲಾಖೆ ಭೂಮಿಯನ್ನು ಕಬಳಿಸಲು ಬಂದಿದ್ದಾರೆ ಎಂದು ಜಿಲ್ಲಾ ಪ್ರಧಾನ ಸಂಚಾಲಕರಾದ ಎಂ ಸಿ ಹಳ್ಳಿ ವೇಣು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದ್ದಂತೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳದಿಂದ ವಾಪಸ್ ಹೋದ ಘಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಹೇಂದ್ರ ತಾಲೂಕು ವಿದ್ಯಾರ್ಥಿ ಒಕ್ಕೂಟದ ಸಂಚಾಲಕರು, ಕೂತಗಾನಹಳ್ಳಿ ಹಿರಿಯ ಮುಖಂಡರಾದ ಯಲ್ಲಪ್ಪನವರು, ಕೂತಗಾನಹಳ್ಳಿ ಹಾಗೂ ಇಟ್ಟಂಗೂರು ಸಾಗುವಳಿದಾರರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos