ಗೋವಾ ಸದನದಲ್ಲಿ ಭಾಷಾಂತರನ್ನು ನೇಮಿಸಿ

ಗೋವಾ ಸದನದಲ್ಲಿ ಭಾಷಾಂತರನ್ನು ನೇಮಿಸಿ

ಪಣಜಿ, ಜು. 27 : ”ನಾನು ಕೂಡಾ ಚರ್ಚೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಭಾಷಾಂತರಕಾರರನ್ನು ನೇಮಿಸಿ,” ಎಂದು ಸ್ಪೀಕರ್ ರಾಜೇಶ್ ಪಟ್ನೇಕರ್ ಅವರಿಗೆ ಮನವಿ ಮಾಡಿದರು.
ಗೋವಾ ವಿಧಾನಸಭೆಯಲ್ಲಿ ಕನ್ನಡ ಮಾತನಾಡುವ ಶಾಸಕರನ್ನು ನೋಡುವ ದಿನ ಸನಿಹದಲ್ಲಿಯೇ ಬರಬಹುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸದನದಲ್ಲಿ ಇಬ್ಬರು ಶಾಸಕರು ಮರಾಠಿಯಲ್ಲಿ ನಡೆಸಿದ ಸಂಭಾಷಣೆ ತಮಗೆ ಅರ್ಥವಾಗಿಲ್ಲ ಎಂದು ಇನ್ನೊಬ್ಬ ಶಾಸಕರು ದೂರು ನೀಡಿದಾಗ ಮಧ್ಯಪ್ರವೇಶಿಸಿದ ಸಾವಂತ್ ಅವರು, ”ನಾವು ಸದನದಲ್ಲಿ ಹಿಂದಿ, ಮರಾಠಿ, ಇಂಗ್ಲಿಷ್ನಲ್ಲಿ ಮಾತನಾಡುತ್ತೇವೆ. ಸದ್ಯವೇ ಕನ್ನಡದಲ್ಲಿ ಮಾತನಾಡುವ ಶಾಸಕರೂ ಬರಬಹುದು,” ಎಂದು ಹೇಳಿದರು. ಜತೆಗೆ, ಸ್ಪೀಕರ್ ಅವರಿಗೆ ಅನುವಾದಕರ ನೇಮಕಕ್ಕೆ ಮನವಿ ಮಾಡಿದರು. ಪ್ರಶ್ನೋತ್ತರ ವೇಳೆಯಲ್ಲಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮತ್ತು ಎಂಜಿಪಿ ಶಾಸಕ ಸುದಿನ್ ಧವಳೀಕರ್ ಮರಾಠಿಯಲ್ಲಿ ಮಾತನಾಡಲು ಆರಂಭಿಸಿದಾಗ ಎನ್ಸಿಪಿಯ ಚರ್ಚಿಲ್ ಆಲೆಮಾವೊ ಆಕ್ಷೇಪ ಎತ್ತಿದರು.

ಫ್ರೆಶ್ ನ್ಯೂಸ್

Latest Posts

Featured Videos