ಸರ್ಕಾರಿ ನೌಕರರಿಗೆ ಬಂಪರ್ ಆಫರ್

ಸರ್ಕಾರಿ ನೌಕರರಿಗೆ ಬಂಪರ್ ಆಫರ್

ಬೆಂಗಳೂರು, ಜೂನ್. 7, ನ್ಯೂಸ್ ಎಕ್ಸ್ ಪ್ರೆಸ್  : 17 ರಾಜ್ಯಗಳಲ್ಲಿ ಪ್ರತಿ ಶನಿವಾರ ರಜೆ ಜಾರಿಯಲ್ಲಿದೆ. ೪ ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರಜೆಗೆ ಒತ್ತಾಯ ಇತ್ತು. ಜಯಂತಿಗಳು, ಹಬ್ಬಗಳನ್ನು ಕಡಿತ ಮಾಡಬೇಕಾ ಎಂಬ ಚರ್ಚೆ ನಡೆಯಿತು. ಈಗ ಕ್ಯಾಸ್ಯುವಲ್ ರಜೆ ಕಡಿತಗೊಳಿಸಿ ೪ ಶನಿವಾರ ರಜೆಗೆ ನಿರ್ಧಾರ ಮಾಡಲಾಗಿದೆ. ಎಲ್ಲ ಇಲಾಖೆ ಹಾಗೂ ಶಾಲಾ ಕಾಲೇಜುಗಳಿಗೂ ಇದು ಅನ್ವಯ ಆಗಲಿದೆ. ಆದರೆ, ಇದು ಮುಂದಿನ ವರ್ಷದಿಂದ ಜಾರಿಗೆ ತರಬೇಕಾ ಅಥವಾ ತಕ್ಷಣವೇ ಜಾರಿಯಾಗಬೇಕಾ ಅನ್ನೋದು ಶೀಘ್ರದಲ್ಲೆ ತೀರ್ಮಾನವಾಗಲಿದೆ) ( ಇಂಟ್ರೊÃ)
ಬೆಂಗಳೂರು ಜೂನ್ ೬: ೧೭ ರಾಜ್ಯಗಳಲ್ಲಿ ಪ್ರತಿ ಶನಿವಾರ ರಜೆ ಜಾರಿಯಲ್ಲಿದೆ. ೪ ರಾಜ್ಯಗಳಲ್ಲಿ ತಿಂಗಳಲ್ಲಿ ಎರಡು ಶನಿವಾರ ರಜೆ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ರಜೆಗೆ ಒತ್ತಾಯ ಇತ್ತು. ಜಯಂತಿಗಳು, ಹಬ್ಬಗಳನ್ನು ಕಡಿತ ಮಾಡಬೇಕಾ ಎಂಬುದರ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯ್ತು.
ಸಂಪುಟ ಸಭೆಯ ಕುರಿತು ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಈಗ ಕ್ಯಾಸ್ಯುವಲ್ ರಜೆ ಕಡಿತಗೊಳಿಸಿ ನಾಲ್ಕನೇ ಶನಿವಾರ ರಜೆಗೆ ನಿರ್ಧಾರ ಮಾಡಲಾಗಿದೆ. ಎಲ್ಲ ಇಲಾಖೆ ಹಾಗೂ ಶಾಲಾ ಕಾಲೇಜುಗಳಿಗೂ ಇದು ಅನ್ವಯ ಆಗಲಿದೆ. ಆದರೆ, ಇದು ಮುಂದಿನ ವರ್ಷದಿಂದ ಜಾರಿಗೆ ತರಬೇಕಾ ಅಥವಾ ತಕ್ಷಣವೇ ಜಾರಿಯಾಗಬೇಕಾ ಅನ್ನೋದು ತೀರ್ಮಾನ ಆಗುತ್ತೆ ಎಂದರು.
‘ಸಿ’ ಮತ್ತು ‘ಡಿ’ ಗ್ರೂಪ್ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆಯ ವ್ಯವಸ್ಥೆ ಅವಶ್ಯ. ಅದಕ್ಕಾಗಿ ಕರಡು ಕಾನೂನು ಜಾರಿಗೆ ತರಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಬರುವ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲಾಗುವುದು. ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೆ ನಿರ್ಧರಿಸಲಾಗಿದೆ. ವರ್ಗಾವಣೆಗೆ ‘ಸಿ’ ಗ್ರೂಪ್‌ಗೆ ೫ವರ್ಷ ಡಿ ಗ್ರೂಪ್‌ಗೆ ೭ವರ್ಷ ನಿಗದಿ ಮಾಡಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಖಾಲಿ ಹುದ್ದೆ ಭರ್ತಿ?
ಬೀದರ್, ಕಲಬುರ್ಗಿ, ಯಾದಗಿರಿ, ಉತ್ತರ ಕನ್ನಡ, ಕೊಡಗು, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆ ತುಂಬಲು ಆದ್ಯತೆ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ ಎಂದರು. ಸಚಿವಾಲಯದ ವರ್ಗಾವಣೆ ಬಗ್ಗೆ ಚರ್ಚೆಯಾಗಿಲ್ಲ. ಇದಕ್ಕೆ ಪ್ರತ್ಯೇಕ ನಿಯಮಾವಳಿಗಳಿವೆ. ಇಲ್ಲೇ ಭರ್ತಿಯಾಗುತ್ತೆ, ಇಲ್ಲೇ ವರ್ಗಾವಣೆಯಾಗಲಿದೆ. ಪ್ರತ್ಯೇಕ ಇರುವುದರಿಂದ ಇದರ ಚರ್ಚೆ ನಡೆದಿಲ್ಲ. ಚರ್ಚೆಯಾಗುವುದಕ್ಕೆ ಮುಕ್ತ ಅವಕಾಶವಿದೆ ಎಂದು ಸಚಿವರು ತಿಳಿಸಿದರು.
ಕುಡಿಯೋ ನೀರಿಗೆ ಆದ್ಯತೆ
ಕೋಲಾರ, ಚಿಕ್ಕಬಳ್ಳಾಪುರ ಕೆರೆ ತುಂಬಿಸುವ ಯೋಜನೆಗೆ ೪೫೦ಕೋಟಿ ಅನುದಾನ, ಮೈಸೂರು ಮೆಡಿಕಲ್ ಕಾಲೇಜು ಸೌಲಭ್ಯಕ್ಕೆ ಅನುದಾನ, ಲೈಬ್ರರಿ, ಹಾಸ್ಟೆಲ್ ನಿರ್ಮಾಣಕ್ಕೆ ೧೨೦ಕೋಟಿ ಟೆಂಡರ್ ಗೆ ಅನುಮತಿ, ಕೊಪ್ಪಳ ಆಸ್ಪತ್ರೆ ೩೫೦ ಹಾಸಿಗೆಯಿಂದ ೪೫೦ ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಸಮ್ಮತಿ ಸೂಚಿಸಿದೆ. ರಾಜ್ಯದಲ್ಲಿ ೧೬ಸಾವಿರ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಮಾಡಿ, ನಿರ್ವಹಣೆ ಮಾಡಲು ಗ್ರಾ.ಪಂ.ಗೆ ಜವಾಬ್ದಾರಿ ನೀಡಲಾಗುತ್ತದೆ. ಆದರೆ ಈ ಹಿಂದಿನ ನೀರು ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ಹಲವು ಆರೋಪಗಳು ಕೇಳಿಬಂದಿವೆ. ಹೀಗಾಗಿ ಮಾರ್ಗಸೂಚಿ ಸಿದ್ಧಮಾಡಿದ್ದೇವೆ. ನಿರ್ವಹಣೆಗೆ ಟೆಂಡರ್ ಮೂಲಕ ಹೊರಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ. ಘಟಕದ ರಿಪೇರಿಗೆ ಸರಾಸರಿ ೩ಸಾವಿರ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಐದು ವರ್ಷಕ್ಕೆ ೨೩೩ಕೋಟಿ ಅನುದಾನ ಇಡಲಾಗಿದೆ. ಎಂದು ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos