ನೆಲ್ಲಿಕಾಯಿ ಆರೋಗ್ಯಕ್ಕೆ ಒಳ‍್ಳೆಯದು

ನೆಲ್ಲಿಕಾಯಿ ಆರೋಗ್ಯಕ್ಕೆ ಒಳ‍್ಳೆಯದು

ಬೆಂಗಳೂರು, ಜ. 24: ನೆಲ್ಲಿಕಾಯಿ ಸಣ್ಣದಾದರೂ ಅದರಲ್ಲಿ ಅಡಗಿರುವಂತಹ ಪೋಷಕಾಂಶಗಳು, ಆರೋಗ್ಯ ಲಾಭಗಳು ಅಪಾರ. ಪ್ರಾಚೀನ ಕಾಲದಿಂದಲೂ ನೆಲ್ಲಿಕಾಯಿಯನ್ನು ಔಷಧಿಯಾಗಿ ಬಳಸಿಕೊಂಡು ಬರಲಾಗುತ್ತಿದೆ. ಹಿಂದಿನ ಕಾಲದಲ್ಲಿ ನೆಲ್ಲಿಕಾಯಿಯಲ್ಲಿ ಉಪ್ಪಿನಕಾಯಿ, ಚಟ್ನಿ, ಜಾಮ್ ಮತ್ತು ಮುರಬ್ಬಸ್ ಮಾಡಲು ಬಳಸಲಾಗುತ್ತಿತ್ತು. ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.

ನೆಲ್ಲಿ ಕಾಯಿಯಿಂದ ಆಮ್ಲ ಜ್ಯೂಸ್ ತಯಾರಿಸಲಾಗುತ್ತದೆ, ಯಾವುದೇ ಆರ್ಯುವೇದ ಅಂಗಡಿಗಳಲ್ಲಿ ಕೇಳಿದರೆ ಈ ಜ್ಯೂಸ್ ದೊರೆಯುತ್ತದೆ. ಇದನ್ನು ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

* ಕಣ್ಣು, ಕೂದಲು ಹಾಗೂ ಜೀರ್ಣಕ್ರಿಯೆಗೆ ಇದು ಒಳ್ಳೆಯದು.

*ನಿಗದಿತ ಪ್ರಮಾಣದಲ್ಲಿ ಜೇನು ಜೊತೆ ತೆಗೆದುಕೊಳ್ಳುತ್ತಾ ಈ ಜ್ಯೂಸ್ ಕುಡಿದರೆ ಅಸ್ತಮಾ ಕಾಯಿಲೆ ಕಡಿಮೆಯಾಗುವುದು.

*ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುದರಿಂದ ತ್ವಚೆ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ.

*ಚರ್ಮದ ಮೇಲಿನ ಕಪ್ಪು ಕಲೆಗಳನ್ನು ತೆಗೆದುಹಾಕಲು ನೆಲ್ಲಿಕಾಯಿ ರಸವನ್ನು ಅನ್ವಯಿಸಬಹುದು.

* ಮಲಬದ್ಧತೆ ಸಮಸ್ಯೆಯಿಂದ ತುಂಬಾ ಕಾಲದಿಂದ ಬಳಲುತ್ತಿರುವವರು ಆಮ್ಲ ಜ್ಯೂಸ್ ಕುಡಿದರೆ ಈ ಸಮಸ್ಯೆ ಗುಣಮುಖವಾಗುವುದು.

* ಮುಟ್ಟಿನ ಸಮಯದಲ್ಲಿ ತುಂಬಾ ರಕ್ತಸ್ರಾವವಾಗುತ್ತಿದ್ದರೆ ಹಣ್ಣಾದ ಬಾಳೆ ಹಣ್ಣನ್ನು ತಿಂದು ಈ ಆಮ್ಲವನ್ನು ಕುಡಿದರೆ ತುಂಬಾ ರಕ್ತಸ್ರಾವವಾಗುವುದಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos