ಆಯುರ್ವೇದಿಕ್ ಸ್ಯಾನಿಟೈಸರ್ ಬಳಕೆ ಉತ್ತಮ – ಸತೀಶ್ ರೆಡ್ಡಿ

ಆಯುರ್ವೇದಿಕ್ ಸ್ಯಾನಿಟೈಸರ್ ಬಳಕೆ ಉತ್ತಮ – ಸತೀಶ್ ರೆಡ್ಡಿ

 

ಬೆಂಗಳೂರು : ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆ ಸ್ಯಾನಿಟೈಸರ್ ಬಳಕೆ ಮುಖ್ಯವಾಗಿದ್ದು, ನೈಸರ್ಗಿಕದತ್ತ ಆಯುರ್ವೇದಿಕ್ ಸ್ಯಾನಿಟೈಸರ್ ಬಳಕೆಗೆ ಆದ್ಯತೆ ನೀಡುವಂತೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಜನತೆಯಲಿ ಮನವಿ ಮಾಡಿದರು.

ಬೆಂಗಳೂರಿನ ವಿಶಿಷ್ಟ ಕೊಲ್ಹಾಪುರಿ ಅಮ್ಮ ಎಂಟೈರ್‌ ಪ್ರೈಸಸ್ ತಯಾರಿಸಿದ ಸ್ಯಾನಿಟೈಸರ್ ತಮ್ಮ ಗೃಹ ಕಚೇರಿಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ವಿದೇಶಿ ಸ್ವಾನಿಟೈಸರ್ ಬದಲು ಸ್ವದೇಶಿ ಅಂದರೆ ಆಯುರ್ವೇದಿಕ್ ಸ್ಯಾನಿಟೈಸರ್ ಬಳಸಬೇಕೆಂದು ಕರೆ ನೀಡಿದರು.

ಕೊಲ್ಹಾಪುರಿ ಅಮ್ಮ ಎಂಟೈರ್‌ ಪ್ರೈಸಸ್ ತಯಾರಿಸಿದ ಇನ್ ಡಾಟ್ ಡಯಾ ಹೆಸರಿನ ಸ್ಯಾನಿಟೈಸರ್ ನೈಸರ್ಗಿಕದತ್ತವಾದುದಾಗಿದೆ. ವಿದೇಶಿ ಸ್ಯಾನಿಟೈಸರ್‌ನಲ್ಲಿ ಆಲ್ಕೋಹಾಲ್ ಪ್ರಮಾಣ ಹಾಗೂ ರಾಸಾಯನಿಕಗಳು ಯಥೇಚ್ಛವಾಗಿರುತ್ತದೆ. ಇದರಿಂದ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಹಾಗಾಗಿ ಸ್ವದೇಶಿ ನಿರ್ಮಿತ ಸ್ಯಾನಿಟೈಸರ್ ಬಳಕೆಗೆ ಒತ್ತು ನೀಡಬೇಕು. ವಿದೇಶಿ ವಸ್ತುಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಲ್ಹಾಪುರಿ ಅಮ್ಮ ಎಂಟೈರ್ ‌ಪ್ರೈಸಸ್  ಸಂಸ್ಥೆಯ ಮಾಲೀಕ ಸುರೇಂದ್ರ ರೆಡ್ಡಿ ಅಲ್ಪಸಂಖ್ಯಾತ ಮುಖಂಡ ಸಯ್ಯದ್ ಸಲಾಂ, ಬಿಜೆಪಿ ಮುಖಂಡರಾದ ಲಕ್ಷ್ಮಣ  ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos