ವಾಹನ ಸವಾರರಿಗೆ ಗುಡ್ ನ್ಯೂಸ್

ವಾಹನ ಸವಾರರಿಗೆ ಗುಡ್ ನ್ಯೂಸ್

ಬೆಂಗಳೂರು, ಮಾ. 02: ಕೆಲವು ದಿನಗಳ ಹಿಂದೆ ಪೆಟ್ರೋಲ್-ಡೀಸೆಲ್ ದರ ದಿನದಿಂದ ದಿನಕ್ಕೆ ಹೆಚ್ಚಳವಾಗಿತ್ತು. ಆದರೆ ನೆನ್ನೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿದ್ದು, ವಾಹನ ಸವಾರ ಮುಖದಲ್ಲಿ ಖುಷಿ ತಂದಿದೆ.

ಹೌದು, ನಿನ್ನೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡ ಹಿನ್ನೆಲೆ ವಾಹನ ಸವಾರರು ಖುಷಿಯಾಗಿದ್ದರು, ಇಂದು ಮತ್ತೆ ಇಳಿಕೆ ಕಂಡಿರುವ ತೈಲ ಬೆಲೆ ಸವಾರರ ಖುಷಿಯನ್ನು ದುಪ್ಪಟ್ಟುಗೊಳಿಸಿದೆ.

ನಿನ್ನೆ ಪೆಟ್ರೋಲ್ ಬೆಲೆ ವಿವಿಧ ರಾಜ್ಯಗಳಲ್ಲಿ 20 ರಿಂದ 26 ಪೈಸೆ ಇಳಿಕೆಯಾಗಿತ್ತು, ಡೀಸೆಲ್ ಬೆಲೆ 20 ರಿಂದ 26 ಪೈಸೆ ಕಡಿಮೆಯಾಗಿತ್ತು.

ಇಂದು ಪೆಟ್ರೋಲ್ ಬೆಲೆ 22ರಿಂದ 23 ಪೈಸೆ ಇಳಿಕೆ ಕಂಡಿದ್ದರೆ, ಡೀಸೆಲ್ ಬೆಲೆ 20ರಿಂದ 21 ಪೈಸೆ ಇಳಿಕೆ ಕಂಡಿದೆ. ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 73.94 ಇದ್ದು, ಡೀಸೆಲ್ ಬೆಲೆ 66.29 ಇದೆ.

 

ಫ್ರೆಶ್ ನ್ಯೂಸ್

Latest Posts

Featured Videos