ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ

ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ

ಬೆಂಗಳೂರು: ಇಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಅಲ್ಲು ಅರ್ಜುನ್ ಅಭಿಮಾನಿಗಳ ಕಾಯುವಿಕೆ ಅಂತ್ಯವಾಗಿದೆ. ಪುಷ್ಪ 2 ನಿರ್ಮಾಪಕರು ಪುಷ್ಪರಾಜ್‌ಗೆ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌ ಕೊಟ್ಟಿದ್ದಾರೆ. ಇಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪುಷ್ಪ 2 ಟೀಸರ್ ಬಿಡುಗಡೆ ಮಾಡಲಾಗಿದೆ. ಭಾರೀ ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿರುವ ಈ ಟೀಸರ್ ಚಿತ್ರದ ಹೈಪ್ ಹೆಚ್ಚಿಸಿದೆ.

ಫುಲ್ ಮಾಸ್ ಅವತಾರದಲ್ಲಿ ಅಲ್ಲು ಅರ್ಜುನ್ ನೋಡಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದೆ. ದೇವಿ ಶ್ರೀ ನೀಡಿದ ಬಿಜಿಎಂ ಗೂಸ್‌ಬಂಪ್ಸ್ ಬರಿಸುವಂತಿದೆ. ಹಿಂದೆಂದೂ ಕಾಣದ ಮಾಸ್‌ ಗೆಟಪ್‌ನಲ್ಲಿ ಅಲ್ಲು ಅರ್ಜುನ್‌ ಮಿಂಚಿದ್ದಾರೆ. ಒಂದೇ ಒಂದು ಡೈಲಾಗ್ ಇಲ್ಲದ ಕೇವಲ ಬಿಜಿಎಂ ಜೊತೆಗೆ ಬರುವ ಇಡೀ ಟೀಸರ್ ಗೂಸ್ ಬಂಪ್ಸ್ ನೀಡುತ್ತಿದೆ. ಪುಷ್ಪಾ 2 ಟೀಸರ್ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ ನೀಡಿದೆ.

ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್‌ನಲ್ಲಿ ಬರುವ ಪುಷ್ಪ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿದ್ದು ಗೊತ್ತೇ ಇದೆ. ಆ ಕಂಟೆಂಟ್.. ಆ ಮ್ಯೂಸಿಕ್ ಪ್ಯಾನ್ ಇಂಡಿಯಾವನ್ನೇ ಬೆಚ್ಚಿಬೀಳಿಸಿತ್ತು. ಪುಷ್ಪರಾಜ್ ಪಾತ್ರದಲ್ಲಿ ನಟಿಸಿದ ಅಲ್ಲು ಅರ್ಜುನ್ ಕಂಡು ಇಡೀ ದೇಶವೇ ಮೆಚ್ಚಿಕೊಂಡಿದೆ. ಈಗ ಈ ಚಿತ್ರದ ಎರಡನೇ ಭಾಗವಾದ ಪುಷ್ಪ 2 ದಿ ರೂಲ್ ಟೀಸ್ರ್‌ ಜನರ ನಿರೀಕ್ಷೆಯನ್ನು ಹೆಚ್ಚಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos