ಮಾಂಸ ಪ್ರಿಯರಿಗೆ ಗುಡ್ ನ್ಯೂಸ್

ಮಾಂಸ ಪ್ರಿಯರಿಗೆ ಗುಡ್ ನ್ಯೂಸ್

ಬೆಂಗಳೂರು, ಏ.10 : ಲಾಕ್ಡೌನ್ ಜಾರಿ ಹಿನ್ನಲೆ ಮನೆಯಿಂದ ಹೊರ ಬರಲಾರದೇ ಜನ ಕಂಗಾಲಾಗಿ ಹೋಗಿದ್ದಾರೆ. ಮಾಂಸಾಹಾರದ ಹೋಟೆಲ್ ಬಂದ್ ಆಗಿರುವುದರಿಂದ ನಾಲಗೆಗೆ ಮಾಂಸದ ಅಡುಗೆ ರುಚಿ ಇಲ್ಲದೇ ಮಾಂಸಪ್ರಿಯರು ಅನೇಕ ಕಡೆ ಹಾತೊರೆಯುತ್ತಿದ್ದಾರೆ. ಮನೆಯಲ್ಲಿ ಮಾಂಸದ ಅಡುಗೆ ಮಾಡಲು ಕೆಲವೆಡೆ ಮಾಂಸವೇ ಸಿಗುತ್ತಿರಲಿಲ್ಲ.
ಕೆಲವೆಡೆ ಮಾಂಸ ಮಾರಾಟ ಮಾಡಿದ್ದರೂ ಹೆಚ್ಚಿನ ಕಡೆಗಳಲ್ಲಿ ಮಾಂಸ ಪ್ರಿಯರಿಗೆ ಮಾಂಸ ಸಿಗದೇ ಸಮಸ್ಯೆಯಾಗಿತ್ತು. ಅನೇಕ ಕಡೆ ಮಾಂಸ ಮಾರಾಟದ ಅಂಗಡಿಗಳು ಓಪನ್ ಆಗಿದ್ದರೂ ಕೆಲವೇ ಗಂಟೆಯಲ್ಲಿ ಖಾಲಿಯಾಗಿ ಅಂಗಡಿ ಬಂದ್ ಮಾಡಲಾಗುತ್ತಿತ್ತು. ಮತ್ತೆ ಕೆಲವೆಡೆ ಹಕ್ಕಿಜ್ವರದ ಕಾರಣದಿಂದ ಚಿಕನ್ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಲಾಕ್ ಡೌನ್ ಆರಂಭದ ದಿನಗಳಲ್ಲಿ, ಯುಗಾದಿ ಹೊಸ ತೊಡಕು ವೇಳೆ ಮಾಂಸ ಸಿಗದೇ ಅನೇಕರು ನಿರಾಸೆ ಅನುಭವಿಸುವಂತಾಗಿತ್ತು.
ಈಗ ಕೊರೋನಾ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ಸರ್ಕಾರ ಎರಡು ದಿನಗಳ ಹಿಂದೆ ಬೇಕರಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿದ್ದು ಈಗ ಚಿಕನ್, ಮಾಂಸ, ಮೊಟ್ಟೆ ಮಾರಾಟಕ್ಕೆ ಅವಕಾಶ ನೀಡಿದೆ. ಪಶುಪಾಲನೆ ಮತ್ತು ಪಶುವೈದ್ಯಕೀಯ ಸಚಿವಾಲಯದಿಂದ ಸುತ್ತೋಲೆ ಹೊರಡಿಸಿದ್ದು ಮಾಂಸ, ಚಿಕನ್, ಮೊಟ್ಟೆ ಅಂಗಡಿ ಓಪನ್ ಮಾಡಿ ಮಾರಾಟಕ್ಕೆ ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಡಳಿತದಿಂದ ಸೂಚನೆ ನೀಡಲು ತಿಳಿಸಲಾಗಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಮಾಂಸ, ಚಿಕನ್ ಅಂಗಡಿ ಓಪನ್ ಆಗಿದ್ದು ಖರೀದಿಗೆ ಮುಗಿಬಿದ್ದ ದೃಶ್ಯ ಕಂಡುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos