ಎಳನೀರಿನಿಂದ ಉತ್ತಮ ಆರೋಗ್ಯ

ಎಳನೀರಿನಿಂದ ಉತ್ತಮ ಆರೋಗ್ಯ

ಬೆಂಗಳೂರು, ಸೆ. 28: ನಾವು ಹೆಚ್ಚು ಬಾಯಾರಿಕೆ ಆದಾಗ ಕೋಕಾಕೋಲ, ಪೆಪ್ಸಿ, ಮಿರಿಂಡಾ ಮೊದಲಾದ ಕೃತಕ ಪಾನೀಯಗಳ ಮೊರೆ ಹೋಗುತ್ತೇವೆ. ಇದು ಕ್ಷಣ ಕಾಲ ನಮ್ಮ ಬಾಯಾರಿಕೆಯನ್ನು ನೀಗಿಸಿದರೂ ಬಾಯಾರಿಕೆಯನ್ನು ಹೋಗಲಾಡಿಸದು.

ಎಳನೀರು ಒಂದು ಜನಪ್ರಿಯ ನೈಸರ್ಗಿಕ ಪಾನೀಯವಾಗಿದ್ದು, ಜಗತ್ತಿನಾದ್ಯಂತ ಹೆಚ್ಚಿನ ಜನರು ಇದನ್ನು ಕುಡಿಯುತ್ತಾರೆ. ಎಳನೀರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ ಪಾನೀಯವಾಗಿದೆ. ಹಿಂದಿನ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿರುವ ಎಳನೀರು ವೈದ್ಯಕೀಯ ರಂಗದಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿರುವಂಥದ್ದಾಗಿದೆ. ಎಳನೀರಿನ ಆರೋಗ್ಯಕರಪರಿಣಾಮಗಳನ್ನು ಪಟ್ಟಿ ಮಾಡಲು ಹೊರಟರೆ ದೊಡ್ಡ ಪಟ್ಟಿಯೇ ಬೇಕಾಗಬಹುದು ಇದು ಆಯಾಸದಿಂದ ತಣಿದ ದೇಹಕ್ಕೆ ಪುನರ್ಚೇತನ ನೀಡುವುದು.

ಎಳನೀರು ಕಡಿಮೆ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿರುವುದರಿಂದ ಸೋಡಾ ಮತ್ತು ಕೆಲವೊಂದು ಹಣ್ಣುಗಳ ರಸಕ್ಕಿಂತಲೂ ಇದು ಉತ್ತಮವಾಗಿದೆ. ಎಳನೀರು ನಮ್ಮ ದೇಹದಲ್ಲಿರುವ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುತ್ತದೆ. ಹೊಟ್ಟೆ ಮತ್ತು ಕರುಳುಗಳಲ್ಲಿ ಅಜೀರ್ಣತೆಯ ಕಾರಣ ಎದುರಾಗಿದ್ದ ಆಮ್ಲೀಯತೆ ಮತ್ತು ಈ ಮೂಲಕ ಎದುರಾಗಿದ್ದ ಹೊಟ್ಟೆಯುರಿಯನ್ನು ಕಡಿಮೆಗೊಳಿಸುತ್ತದೆ.

ಎಳನೀರು ಮಕ್ಕಳ ತ್ವಚೆಗೆ ಮಾಯಿಶ್ಚರೈಸರ್ ಮತ್ತು ಟೋನರ್‎ನಂತೆ ಕೆಲಸ ಮಾಡುತ್ತದೆ. ಹೆಚ್ಚುವರಿ ಜಿಡ್ಡನ್ನು ತ್ವಚೆಯಿಂದ ಹೋಗಲಾಡಿಸಿ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ. ಎಳನೀರು ಅಧಿಕ ಪ್ರಮಾಣದ ಮೆಗ್ನೇಶಿಯಮ್ ಮತ್ತು ಪೊಟ್ಯಾಶಿಯಮ್ ಅನ್ನು ಒಳಗೊಂಡಿರುವುದರಿಂದ ಕಡಿಮೆ ರಕ್ತದ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದೊಂದು ಪರಿಣಾಮಕಾರಿ ಸಿದ್ಧೌಷಧವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos