ಮೊಟ್ಟೆ ಸೇವನೆಯಿಂದ ಉತ್ತಮ ಆರೋಗ್ಯ

ಮೊಟ್ಟೆ ಸೇವನೆಯಿಂದ ಉತ್ತಮ ಆರೋಗ್ಯ

ಬೆಂಗಳೂರು, ನ. 08: ಮೊಟ್ಟೆಯು ದೇಹದ ಆರೋಗ್ಯ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೌದು, ಮೊಟ್ಟೆಯಲ್ಲಿ ವಿಟಮಿನ್ಎ, ವಿಟಮಿನ್ ಬಿ5,ವಿಟಮಿನ್ ಬಿ12, ವಿಟಮಿನ್ ಇ, ಒಮೆಗಾ ಸೇರಿದಂತೆ ಹಲವು ಅಂಶಗಳು ಮೊಟ್ಟೆಯಲ್ಲಿದೆ.

ಮೊಟ್ಟೆಯಲ್ಲಿ ಪೌಷ್ಠಿಕಾಂಶಗಳಿರುವುದರಿಂದ ಮೊಟ್ಟೆ ಮತ್ತು ಮೊಟ್ಟೆಯಿಂದ ತಯಾರಿಸಲಾದ ವಿವಿಧ ಆಹಾರ ಪದಾರ್ಥಗಳ ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಬರೀ ಮೊಟ್ಟೆಯನ್ನೇ ತಿನ್ನುವ ಬದಲು ಮೊಟ್ಟೆಯನ್ನು ಬಳಸಿ ತಯಾರಿಸುವ ವಿವಿಧ ಆಹಾರಗಳ ಸೇವನೆ ನಮ್ಮ ನಾಲಿಗೆಗೂ ರುಚಿ ಮತ್ತು ಆರೋಗ್ಯಕ್ಕೂ.

ಬೇಯಿಸಿದ ಮೊಟ್ಟೆ, ಮೊಟ್ಟೆ ಆಮ್ಲೆಟ್, ಮೊಟ್ಟೆ ಬುರ್ಜಿ ಇವೆಲ್ಲಾ ಸಾಮಾನ್ಯವಾಗಿ ಜನಪ್ರಿಯವಾಗಿರುವ ಮೊಟ್ಟೆಯ ಆಹಾರ ರೂಪಗಳಾಗಿವೆ

ಮೊಟ್ಟೆ ತಿನ್ನುವುದರಿಂದ ಜೀರ್ಣಕ್ರಿಯೆ ಚುರುಕಾಗಲಿದೆ. ದೇಹದ ಬೊಜ್ಜು ಕರಗಿಸಲು ಸಹಕಾರಿಯಾಗಿರುವುದು .ಅಲ್ಲದೇ ನಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಲು ನೆರವಾಗುತ್ತದೆ. ಬೇಯಿಸಿದ ಮೊಟ್ಟೆ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಲು ಇದು ನೆರವಾಗುತ್ತದೆ. ಗರ್ಭಿಣಿಯರು ಮೊಟ್ಟೆಯನ್ನು ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಪೂರೈಕೆಯಾಗಿ ಆರೋಗ್ಯಯುತವಾಗಿ ಬೆಳೆಯಲು ಸಹಾಯವಾಗುತ್ತದೆ. ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ರಕ್ತ ಹೆಪ್ಪು ಗಟ್ಟುವುದನ್ನು ತಡೆಯಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos