ಉತ್ತಮ ನಟಿ ಪ್ರಶಸ್ತಿ ಪಡೆದ ಹರ್ಷಿಕಾ ಪೂಣಚ್ಚ

ಉತ್ತಮ ನಟಿ ಪ್ರಶಸ್ತಿ ಪಡೆದ ಹರ್ಷಿಕಾ ಪೂಣಚ್ಚ

ಬೆಂಗಳೂರು, . 29, ನ್ಯೂಸ್ ಎಕ್ಸ್ ಪ್ರೆಸ್: ಕನ್ನಡ ಚಿತ್ರರಂಗಕ್ಕೆ ‘ಪಿಯೂಸಿ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ ಹರ್ಷಿಕಾ ಪೂಣಚ್ಚ. ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಅವರು ಸ್ಯಾಂಡಲ್ ವುಡ್ ನ ‘ಚಿಟ್ಟೆ’ ಅಂತಾನೇ ಜನಪ್ರಿಯರಾಗಿದ್ದಾರೆ.

ಸದಾ ಗ್ಲಾಮರ್ ಲುಕ್ ನಲ್ಲಿ ಮಿಂಚುತ್ತಿರುವ ಬೆಡಗಿ ಹರ್ಷಿಕಾ ಇದೀಗ ಚಿತ್ತಾರದಲ್ಲೂ ಚಿಟ್ಟೆಯಂತೆ ಕಂಗೊಳಿಸಿದ್ದಾರೆ. ಕನ್ನಡದ ಪ್ರಸಿದ್ಧ ಸಿನಿ ಮ್ಯಾಗಜಿನ್ ‘ಚಿತ್ತಾರ’ 10 ವರ್ಷದ ಸಂಭ್ರಮ ಆಚರಿಸಿದೆ. ಈ ವೇಳೆ ಅವರು ಮಿಂಚಿನಂತ ಉಡುಪು ಧರಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ಇದರೊಂದಿಗೆ ಚಿತ್ತಾರದ ವತಿಯಿಂದ ಪ್ರತಿಭಾನ್ವಿತ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ಅದರಲ್ಲಿ ಹರ್ಷಿಕಾ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

‘ಚಿತ್ತಾರ ಮ್ಯಾಗಜಿನ್ 10 ವರ್ಷಗಳನ್ನು ಪೂರೈಸಿರೋದು ಸಂತೋಷವಾಗಿದೆ. ನಾನು ಕೂಡ ನನ್ನ ಸಿನಿ ಜರ್ನಿಯಲ್ಲಿ ಮಗುವಿನಂತೆ 10 ವರ್ಷಗಳನ್ನು ಕಳೆದಿದ್ದೇನೆ, ನನ್ನ ಸಿನಿರಂಗದಲ್ಲಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos