ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ

ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ
ಭಾರೀ ಬೇಡಿಕೆ ಹೆಚ್ಚಾಗಿರುವ ಕಾರಣ ಚಿನ್ನದ ಬೆಲೆ ಏರಿಕೆ ಕಂಡಿದೆ.

ಅಂತಾರಾಷ್ಟ್ರೀಯವಾಗಿ
ಡಾಲರ್ ಮೌಲ್ಯ ಕುಸಿತ ಕಂಡಿರುವುದೇ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಡಾಲರ್ ಮೌಲ್ಯ ದುರ್ಬಲವಾದಂತೆ
ಚಿನ್ನದ ಮೌಲ್ಯ ಪ್ರಬಲವಾಗುವುದನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಣಬಹುದು.

ಕೈಗಾರಿಕಾ ಘಟಕಗಳು
ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳ್ಳಿ ಬೆಲೆ ಏರಿಕೆ ಕಂಡುಬಂದಿದೆ.
ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ 10 ಗ್ರಾಂ. ಚಿನ್ನದ ಬೆಲೆ 7 ರೂ. ಏರಿಕೆಯಾಗಿ 33,510 ರೂ.ರಷ್ಟಾಗಿದೆ.
ಅದೇ ರೀತಿ ಬೆಳ್ಳಿ ಬೆಲೆ 118 ರೂ. ಏರಿಕೆಯಾಗಿ 40,386 ರೂ.ಗಳಾಗಿದೆ.

ಬೆಂಗಳೂರಿನಲ್ಲಿ
22 ಕ್ಯಾರೆಟ್ ಮತ್ತು 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 31,300 ಹಾಗೂ
33,475.94 ರಷ್ಟಿದೆ. 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 3130 ರಷ್ಟಿದೆ. ಅದೇ ರೀತಿ ಬೆಂಗಳೂರಿನಲ್ಲಿ
1 ಕೆಜಿ ಬೆಳ್ಳಿ ಬೆಲೆ 43,600 ರೂ.ಇದೆ.

ಫ್ರೆಶ್ ನ್ಯೂಸ್

Latest Posts

Featured Videos