ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಗೋಲ್ಡ್ ಮೆಡಲ್ ಅವಾರ್ಡ್

ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಗೋಲ್ಡ್ ಮೆಡಲ್ ಅವಾರ್ಡ್

ದೇವನಹಳ್ಳಿ, ಆ. 31: ಗುಣಮಟ್ಟದ ಶಿಕ್ಶಣಕ್ಕೆ ಪ್ರತಿ ‘ಸ್ಕೋಚ್’ ಅವಾರ್ಡ್ | ದೇಶದ್ಯಾಂತ 45 ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದ ಸಭೆಯಲ್ಲಿ ರಾಷ್ಟ್ರಮಟ್ಟದ ಪ್ರಧಾನ ಮಾಡುವ ಪ್ರತಿಷ್ಠಿತ ಸ್ಕೋಚ್ ಅವಾರ್ಡ್ ಸ್ಪರ್ಧೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಲಭಿಸಿದೆ.

ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಯಲ್ಲಿ 14ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಬಂದಿದ್ದರಿಂದ ಶಿಕ್ಷಣ ಇಲಾಖೆ ಹಾಗೂ ಜಿಪಂ  ಕೈಗೊಂಡಿದ್ದ ಹಲವು ಕಾರ್ಯಕ್ರಮಗಳ ಕುರಿತು ನೀಡಿದ ವಸ್ತುಪ್ರದರ್ಶನದಲ್ಲಿ ಈ ಪ್ರಶಸ್ತಿ ಲಭಿಸಿದೆ.

ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಗೋಲ್ಡ್ ಅವಾರ್ಡ್ ಅನ್ನು ನೀಡಿ ಗೌರವಿಸಿದೆ. ಈ ಕಾರ್ಯಕ್ರಮಕ್ಕೆ ನಿಕಟಪೂರ್ವ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಲತಾ, ಮುಖ್ಯ ಲೆಕ್ಕಾಧಿಕಾರಿ ಟಿ.ಆರ್. ಶೋಭಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಹನುಮಂತಪ್ಪ ಅವರನ್ನು ವಸ್ತು ಪ್ರದರ್ಶನದಲ್ಲಿ ನಿಯೋಜಿಸಲಾಗಿದ್ದು, ಚಿನ್ನದ ಪ್ರಶಸ್ತಿ ಲಭಿಸಲು ಕಾರಣವಾದ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಹಾಗೂ ಜಿಪಂ ಸಿಬ್ಬಂದಿಗೆ ಸಿಇಒ ಅಭಿನಂದಿಸಿದರೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಜಿಲ್ಲೆಗೆ ಲಭಿಸಿಕೊಡುವಲ್ಲಿ ಶ್ರಮಿಸಿದ ಆರ್. ಲತಾ ಅವರಿಗೆ ಶಿಕ್ಷಣ ಇಲಾಖೆ ಹಾಗೂ ಜಿಪಂ ಸಿಬ್ಬಂದಿ ಅಭಿನಂದಿಸಿದ್ದಾರೆ.

54 ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಶಿಕ್ಷಣ, ಸಾರಿಗೆ, ಆಡಳಿತ, ಇ- ಗೌರ್ನೆಸ್, ಆರೋಗ್ಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  ಎಸ್ಸೆಸ್ಸೆಲ್ಸಿ ಪರೀಕ್ಷೆ ಪಲಿತಾಂಶ ಸುಧಾರಣೆ ವಿಭಾಗದಲ್ಲಿ ದೇಶದ ನಾನಾ ಭಾಗಗಳಿಂದ 54ಕ್ಕೂ ಅಧಿಕ ಸ್ಪರ್ಧೆಗಳು ಆಗಮಿಸಿದ್ದು, ಇದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಗೋಲ್ಡ್ ಮೆಡಲ್ ಸಿಕ್ಕಿದೆ.

ದಿಲ್ಲಿಯಲ್ಲಿ ಸ್ವೀಕಾರ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕೈಗೊಂಡ ವಿವಿಧ ಯೋಜನಾ ತಂತ್ರಗಳ ಕುರಿತಂತೆ ನವದೆಹಲಿಯಲ್ಲಿ ವಸ್ತು ಪ್ರದರ್ಶನೆ ಏರ್ಪಡಿಸಲಾಗಿತ್ತು.  ಗುರುವಾರ ನಡೆದ ಅಂತಿಮ ಸುತ್ತಿನಲ್ಲಿ ವಿವಿಧ ರಾಜ್ಯಗಳಿಂದ ಬಂದಿದ್ದ ಸ್ಕೂಚ್ ಸ್ಪರ್ಧಾಳುಗಳ ಪೈಪೋಟಿಯಲ್ಲಿ ನಿಕಟಪೂರ್ವ ಸಿಇಒ, ಹಾಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಪಾಲ್ಗೊಂಡು ಗೋಲ್ಡ್ ಮೆಡಲ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ನಿಕಟಪೂರ್ವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ಪ್ರಶಸ್ತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೆಡಿಪಿ ಸಭೆಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಭೈರೇಗೌಡ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 14 ಸ್ಥಾನಕ್ಕೆ ಬಂದಿದ್ದು, ಮುಂದಿನ ಪರೀಕ್ಷೆ ವೇಳೆಗೆ ಗುಣಮಟ್ಟದ ಫಲಿತಾಂಶ ಬರಬೇಕೆಂದು ಸಲಹೆ ನೀಡಿದರು. ಅದರಂತೆಯೇ ಶಿಕ್ಷಣ ತಜ್ಞರನ್ನು ಸಂಪರ್ಕಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಪ್ರತಿ ಶನಿವಾರ ವಿಶೇಷ ತರಗತಿಗಳು ಹಾಗೂ 35-40 ಅಂಕ ಇರುವವರಿಗೆ ವಿಶೇಷ ಬೋಧನಾ ತರಗತಿಗಳನ್ನು ಮಾಡಲಾಗಿತ್ತು.  ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಗೋಲ್ಡ್ ಅವಾರ್ಡ್ ಸಿಕ್ಕಿರುವುದು ಸಂತಸ ತಂದಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಲ್ಲಿ ಪ್ರಥಮ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕ್ರಮ ಏರ್ಪಡಿಸಲಾಗಿದ್ದು 18 ಮಕ್ಕಳು ಉತ್ತೀರ್ಣರಾಗಿದ್ದರೆ 2ನೇ ಸ್ಥಾನಕ್ಕೆ ಬರುತ್ತಿದ್ದೆವು. ಇನ್ನು 100 ಮಕ್ಕಳು ಉತ್ತೀರ್ಣರಾಗಿದ್ದರೆ ಪ್ರಥಮ ಸ್ಥಾನಕ್ಕೆ ಬರುತ್ತಿದ್ದೆವು. ಕೆಲವೇ ಪಾಯಿಂಟ್‌ ಗಳ ಅಂತರದಲ್ಲಿ ಸ್ಥಾನಗಳು ತಪ್ಪಿವೆ.  ಗೋಲ್ಡ್ ಅವಾರ್ಡ್ ಸಿಕ್ಕಿದ್ದು, ಶಿಕ್ಷಣ ಇಲಾಖೆ ಹಾಗೂ ಜಿಪಂ ಸಿಬ್ಬಂದಿ ಶ್ರಮ ಸಾರ್ಥಕವಾಗಿದೆ. ಉತ್ತಮ ಫಲಿತಾಂಶಕ್ಕೆ ವಿದ್ಯಾರ್ಥಿಗಳು ಶಿಕ್ಷಕರು ಪ್ರೇರಕರಾಗಿದ್ದು ಪ್ರಮುಖವಾಗಿದೆ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos