ಗೋವಾ: ಬಿಜೆಪಿ ದೋಸ್ತಿಪಕ್ಷ ಎಂಜಿಪಿ 3 ಉಪ ಚುನಾವಣೆಯಲೂ ಏಕಾಂಗಿ ಸ್ಪರ್ಧೆ

ಗೋವಾ: ಬಿಜೆಪಿ ದೋಸ್ತಿಪಕ್ಷ ಎಂಜಿಪಿ 3 ಉಪ ಚುನಾವಣೆಯಲೂ ಏಕಾಂಗಿ ಸ್ಪರ್ಧೆ

ಪಣಜಿ, ಮಾ.11, ನ್ಯೂಸ್ ಎಕ್ಸ್ ಪ್ರೆಸ್: ಮುಂದಿನ ತಿಂಗಳು ನಡೆಯಲಿರುವ ಅಸೆಂಬ್ಲಿ ಉಪ ಚುನಾವಣೆಯಲ್ಲಿ ತಾನು ಎಲ್ಲ 3  ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಗೋವಾದ ಆಡಳಿತಾರೂಢ ಬಿಜೆಪಿ ಮೈತ್ರಿ ಪಕ್ಷ ಮಹಾರಾಷ್ಟ್ರವಾಡಿ ಗೋಮಂತಕ್ ಪಾರ್ಟಿ(ಎಂಜಿಪಿ) ಸೋಮವಾರ ತಿಳಿಸಿದೆ.

ಶಿರೋಡ, ಮಾಂಡ್ರೆಮ್ ಹಾಗೂ ಮಾಪುಸ ವಿಧಾನಸಭಾ ಕ್ಷೇತ್ರಗಳಲ್ಲಿ ಎ.23ರಂದು ಲೋಕಸಭಾ ಚುನಾವಣೆಯ ಜೊತೆಗೆ ಉಪ ಚುನಾವಣೆ ನಡೆಯಲಿದೆ.

ಎಂಜಿಪಿ ಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಪಕ್ಷೇತರರ ಜೊತೆಗೂಡಿ ಮನೋಹರ್ ಪಾರಿಕ್ಕರ್ ನೇತೃತ್ವದ ಗೋವಾ ಸರಕಾರಕ್ಕೆ ಬೆಂಬಲ ನೀಡಿದೆ. ಹಾಲಿ ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಕಾರಣ ಶಿರೋಡ ಹಾಗೂ ಮಾಂಡ್ರೆಮ್ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಅವಶ್ಯವೆನಿಸಿದೆ. ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ಮೃತಪಟ್ಟಿರುವ ಕಾರಣ ಮಾಪುಸ ಕ್ಷೇತ್ರ ತೆರವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos