ಹೊಳೆಯುವ ಚರ್ಮಕ್ಕಾಗಿ ಈ ಕ್ರಮಗಳನ್ನು ಬಳಸಿ!

ಹೊಳೆಯುವ ಚರ್ಮಕ್ಕಾಗಿ ಈ ಕ್ರಮಗಳನ್ನು ಬಳಸಿ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಸೌಂದರ್ಯ ಕಾಪಾಡಲು ತುಂಬಾ ಕಷ್ಟಕರವಾಗಿದೆ ಇದರಿಂದ ನಾವು ಅನೇಕ ಕ್ರೀಮ್ಗಳನ್ನು ಬಳಸುತ್ತೀರಿ, ಆದರೆ ಇದರಿಂದ ನಮಗೆ ಅಪಾಯವೇ ಹೆಚ್ಚಾಗಿರುತ್ತದೆ, ಅದರಿಂದ ನಾವು ದಿನ ನಿತ್ಯ ಮಾಡುವಂತಹ ಕ್ರಮಗಳಲ್ಲಿ ನಮ್ಮ ಸೌಂದರ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದಾಗಿದೆ.

ಬೇಸಿಗೆ ಕಾಲ ಹೊರಗೆ ಹೆಜ್ಜೆಯಿಟ್ಟರೆ ಬಿರುಬಿಸಿಲು ಶುರುವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮುಖಾರವಿಂದ, ಚರ್ಮದ ಬಗ್ಗೆ ವಿಶೇಷ ಕಾಳಜಿಯ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಬೇಸಿಗೆಯಲ್ಲಿ ಸುಕ್ಕುಗಟ್ಟಿದ, ಕಳೆಗುಂದಿದ ಮುಖವನ್ನು ತಾಜಾ ಆಗಿ ಇಡುವುದು ದುಸ್ತರವೇ ಸರಿ. ಕೆಲವರಿಗೆ ದಿನಕ್ಕೆ ಹಲವಾರು ಬಾರಿ ಮುಖವನ್ನು ಉಜ್ಜುವುದು ಅಭ್ಯಾಸವಾಗಿರುತ್ತದೆ. ನಿಮ್ಮ ಮುಖವನ್ನು ಉಜ್ಜಿದಷ್ಟೂ ನಿಮ್ಮ ಮುಖ ಅರಳುತ್ತದೆ ಎಂದು ಪರಿಭಾವಿಸಿರುತ್ತೀರಿ. ಆದರೆ, ಹೀಗೆ ಮಾಡುವುದು ಕೆಲವೊಮ್ಮೆ ಚರ್ಮಕ್ಕೆ ಹಾನಿಕಾರಕ. ಹಾಗಾದರೆ ದಿನಕ್ಕೆ ಎಷ್ಟು ಬಾರಿ ಮುಖವನ್ನು ತೊಳೆಯಬೇಕು ಎಂಬುದನ್ನು ಕಂಡುಕೊಳ್ಳೋಣ.

ಬೆಳಗ್ಗೆ ಎದ್ದಾಗ ಮೊದಲು ಮುಖವನ್ನು ಸ್ಕ್ರಬ್ ಮಾಡಿ. ಇದು ನಿದ್ರಾವಸ್ಥೆಯನ್ನು ನೀಗುವುದರ ಜೊತೆಗೆ, ನಿಮ್ಮ ಮೈಮನ ತಕ್ಷಣವೇ ಉಲ್ಲಾಸಗೊಳ್ಳುತ್ತದೆ. ಮುಖವನ್ನು ಸ್ಕ್ರಬ್ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಸೂಕ್ಷ್ಮ ರಂಧ್ರಗಳು ತೆರವುಗೊಳ್ಳುತ್ತವೆ. ಸೌಮ್ಯವಾದ ಫೇಸ್ ವಾಶ್ ಜೊತೆಗೆ ಸಾಮಾನ್ಯ ನೀರಿನಿಂದ ನಿಮ್ಮ ಮುಖವನ್ನು ಸ್ಕ್ರಬ್ ಮಾಡಲು ಮರೆಯದಿರಿ.

ನೀವು ಕೆಲಸದಿಂದ ಮನೆಗೆ ವಾಪಸಾದಾಗ ನಿಮ್ಮ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ಕಾರಣದಿಂದಾಗಿ, ದೈನಂದಿನ ಆಯಾಸ ದೂರವಾಗುತ್ತದೆ. ಮುಖದಲ್ಲಿರುವ ಕೊಳಕು ಕೂಡ ನಿವಾರಣೆಯಾಗುತ್ತದೆ. ಕೆಲವರು ಬೇಸಿಗೆ ಕಾಲದಲ್ಲಿ ಸಂಜೆ ವೇಳೆಯೂ ಸ್ನಾನ ಮಾಡುತ್ತಾರೆ. ನಿಮಗೆ ಅದು ಸಾಧ್ಯವಾಗದಿದ್ದರೆ, ದಿನಕ್ಕೆ ಒಮ್ಮೆಯಾದರೂ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ.

ಆದರೆ, ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಮತ್ತು ಹೊಳೆಯುವಂತೆ ಮಾಡಲು, ಸಾಧ್ಯವಾದಷ್ಟೂ ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಚರ್ಮವನ್ನು ತೇವವಾಗಿಡುತ್ತದೆ.

ಪ್ರತಿದಿನ ನಿಮ್ಮ ಆಹಾರದಲ್ಲಿ ತಾಜಾ ರಸವನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮವು ಹೊಳೆಯುತ್ತಾ ಇರುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ನಿಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಅದರಲ್ಲೂ ಕ್ಯಾರೆಟ್, ಸೌತೆಕಾಯ, ಪಪ್ಪಾಯಿ, ದಾಳಿಂಬೆ, ಕಲ್ಲಂಗಡಿ, ಮೂಸಂಬಿ, ಕಿತ್ತಳೆ ಮುಂತಾದವುಗಳನ್ನು ಸೇವಿಸುವುದರಿಂದ ಮುಖವನ್ನು ತಾಜಾ ಆಗಿ, ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು.

ಫ್ರೆಶ್ ನ್ಯೂಸ್

Latest Posts

Featured Videos