ಝುಗಮಗಿಸುವ ಚರ್ಚ್, ಕ್ರೀಸ್ ಮಸ್

ಝುಗಮಗಿಸುವ ಚರ್ಚ್, ಕ್ರೀಸ್ ಮಸ್

ಡಿ. 21 : ಕ್ರಿಸ್ವುಸ್ ಎಂದಾಕ್ಷಣ ನಿಮ್ಮ ಕಣ್ಣ ಮುಂದೆ ಬರುವುದು ಝುಗಮಗಿಸುವ ಚರ್ಚ್, ಕ್ರಿಸ್ವುಸ್ ಟ್ರೀ, ನಗುನಗುತ್ತ ಮಲಗಿರುವ ಬಾಲ ಏಸು, ಸಾಂತಾ ಕ್ಲಾಸ್ ಇಷ್ಟೇ ಅಲ್ಲವೆ? ಆದರೆ ನಿಮಗೆ ಗೊತ್ತೆ? ಜಗತ್ತಿನ ವಿವಿಧ ದೇಶಗಳಲ್ಲಿ ಈ ದಿನದಂದು ಕುತೂಹಲಕರ ಆಚರಣೆಗಳು ನಡೆಯುತ್ತವೆ. ಅವುಗಳ ಕುರಿತು ಇಲ್ಲಿವೆ ಕೆಲವು ಮಾಹಿತಿ…
ಮುಸ್ಲಿಂ ರಾಷ್ಟ್ರಗಳನ್ನು ಹೊರತುಪಡಿಸಿ, ಜಗತ್ತಿನ 160ಕ್ಕೂ ಅಧಿಕ ದೇಶಗಳಲ್ಲಿ ಕ್ರಿಸ್ವುಸ್ ಆಚರಣೆ ನಡೆಯುತ್ತದೆ. ಬಹುತೇಕ ದೇಶಗಳಲ್ಲಿ ಈ ಆಚರಣೆಯ ಸೊಗಡು ಒಂದೇ ರೀತಿಯದ್ದು. ಆದರೆ ಕೆಲವು ದೇಶಗಳಲ್ಲಿ ಮಾತ್ರ ವಿಭಿನ್ನ ರೀತಿಯಲ್ಲಿ ಏಸುವಿನ ಜನ್ಮದಿನ ಆಚರಿಸಲಾಗುತ್ತದೆ. ಅದು ಹೇಗೆ ಗೊತ್ತಾ?
ಚಿಂಪಾಂಜಿಗಳಿಗೆ ಬ್ರೆಡ್, ಆಮೆಗಳಿಗೆ ಕಲ್ಲಂಗಡಿ: ಕ್ರಿಸ್ವುಸ್ ಸಂದರ್ಭಗಳಲ್ಲಿ ಮಕ್ಕಳಿಗೆ ಗಿಫ್ಟ್ ಕೊಡುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಸಿಡ್ನಿ, ಲಂಡನ್, ಇಂಗ್ಲೆಂಡ್ ಸೇರಿದಂತೆ ಕೆಲವು ಕಡೆಗಳಲ್ಲಿ ಈ ದಿನದಂದು ಪ್ರಾಣಿಗಳಿಗೆ ಗಿಫ್ಟ್ ಕೊಡಲಾಗುತ್ತದೆ.
ಸಿಡ್ನಿಯ ಟೊರೊಂಗಾ ಮೃಗಾಲಯದಲ್ಲಿ ಡಿಸೆಂಬರ್ ಶುರುವಾಗುತ್ತಿದ್ದಂತೆಯೇ ಪ್ರಾಣಿಗಳಿಗೆ ಕ್ರಿಸ್ವುಸ್ ಉಡುಗೊರೆ ನೀಡುವುದು ಆರಂಭವಾಗಿದೆ. ಚಿಂಪಾಂಜಿಗಳಿಗೆ ಶುಂಠಿ ಬ್ರೆಡ್, ಬಾಳೆ ಹಣ್ಣು ಮತ್ತು ಬಟಾಟೆ ನೀಡಲಾಗುತ್ತಿದೆ. ಇಲ್ಲಿ ಮೀರ್ಕ್ಯಾಟ್ ಎಂಬ ದಕ್ಷಿಣ ಆಫ್ರಿಕಾದ ಪ್ರಾಣಿ ಇದ್ದು, ಅವುಗಳಿಗೆ ಕ್ರಿಸ್ವುಸ್ ಚೀಲದೊಳಗೆ ಹುಳುಗಳನ್ನು ನೀಡಲಾಗುತ್ತದೆ. ಇನ್ನು ಆಮೆಗಳಿಗೆ ಕ್ರಿಸ್ವುಸ್ ಟ್ರೀಯಂತೆ ಕಂಗೊಳಿಸುವ ಕಲ್ಲಂಗಡಿ ಹಣ್ಣಿನ ಊಟ ನೀಡಲಾಗುತ್ತದೆ

ಫ್ರೆಶ್ ನ್ಯೂಸ್

Latest Posts

Featured Videos